

ಸವಣೂರ: ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ಹೋರಾಡಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಅದಕ್ಕಾಗಿ ನಮ್ಮ ಸೇವೆಯ ಮೂಲಕ ದೇಶದ ಏಕತೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ಉತ್ಸಾಹ ಮತ್ತು ಉಲ್ಲಾಸದಿಂದ ಹಬ್ಬದ ವಾತಾವರಣದಂತೆ ಸಂಭ್ರಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ, ಹಿಂದು ರಾಷ್ಟ್ರದ ಪರಂಪರೆ, ಸಂತ, ಶರಣರ, ಪರಿಸರ ರಕ್ಷಿಸಿ ಜೀವ ಉಳಿಸಿ ಎನ್ನುವ ಸಂದೇಶವನ್ನು ಸಾರುವ ವೇಷ ಭೂಷಣಗಳನ್ನು ವಿದ್ಯಾರ್ಥಿಗಳು ತೊಟ್ಟು ಗಮನ ಸೆಳೆದರು. ನಂತರ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ನಿವೃತ್ತ ಯೋಧರಾದ ಸಿದ್ದಪ್ಪ ಅಂಗಡಿ, ಜಗದೀಶ ನೀರಲಗಿ, ಕರಬಸಪ್ಪ ಗುಜರಿ, ತಿಪ್ಪನಗೌಡ ಪಾಟೀಲ, ಶೌರ್ಯ ಪ್ರಶಸ್ತಿ ಪುರಸ್ಕೃತ ಚಂದ್ರಪ್ಪ ಲಮಾಣಿ, ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾದ ಶಿವಗಂಗವ್ವ ಪಾಟೀಲ, ನಿಂಗಪ್ಪ ಕುಲಕರ್ಣಿ, ಮಹಮ್ಮದ ಯಾಸೀನ ಸುಂಕದ, ಬಾಬನಸಾಬ್ ದುಕಾನದಾರ, ಖಾದರಗೌಸ ಲಾಡಲೇವಾಲೆ ಅವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಗಣೇಶ ಪೂಜಾರ, ಸಿಪಿಐ ಆನಂದ ಒನಕುದರೆ, ತಾಪಂ ಇಒ ನವೀನಪ್ರಸಾದ ಕಟ್ಟಿಮನಿ, ಮಹೇಶ ದೊಡ್ಡಣ್ಣವರ, ಬಿಇಒ ಮಹದೇವಪ್ಪ ಬಾರ್ಕಿ, ಸರಸ್ವತಿ ಗಜಕೋಶ, ಸುಲೋಚನಾ ಕಟ್ನೂರ, ಕಲ್ಮೇಶ ಸುಣದೊಳ್ಳಿ, ಮಲ್ಲಾರಪ್ಪ ತಳಿಹಳ್ಳಿ, ಗಂಗಾಧರ ಬಾಣದ, ಮಹೇಶ ಸಾಲಿಮಠ, ಮಾಲತೇಶ ಮೆಣಸಿನಕಾಯಿ, ರಾಮಣ್ಣ ಅಗಸರ, ಪರಶುರಾಮ ಈಳಗೇರ ಇತರರು ಇದ್ದರು.