ಪ್ರತಿಯೊಬ್ಬರೂ ದುಷ್ಚಟಗಳಿಂದ ದೂರವಿರಿ

Untitled design
ವಟಗಲ್‌ನಲ್ಲಿ ಆಯೋಜಿಸಿದ್ದ ‘ತ್ಯಾಗದ ತೊಟ್ಟಿಲು’ ನಾಟಕ ಪ್ರದರ್ಶನ ಗಣ್ಯರು ಉದ್ಘಾಟಿಸಿದರು. ಪ್ರಮುಖರಾದ ಅಮರೇಗೌಡ ಪೊಲೀಸ್ ಪಾಟೀಲ್, ಬಸವರಾಜ ಬುಂಕಲದೊಡ್ಡಿ, ಆದನಗೌಡ, ಹನುಮಂತಪ್ಪ, ಬಲವಂತರಾಯಗೌಡ, ಶಿವುಕುಮಾರ ಪೊಲೀಸ್ ಪಾಟೀಲ್, ರಾಮರಡ್ಡಿ ಉಪಸ್ಥಿತರಿದ್ದರು.
Published on

ಕವಿತಾಳ: ಸಮಾಜ ತಿದ್ದುವಲ್ಲಿ ನಾಟಕಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಮುಖಂಡ ವೆಂಕಟೇಶ ಪಾಟೀಲ್ ಹೇಳಿದರು.


ವಟಗಲ್‌ನಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಜಗಜ್ಯೋತಿ ಬಸವೇಶ್ವರ ನವತರುಣ ನಾಟ್ಯಸಂಘದಿಂದ ಸೋಮವಾರ ಆಯೋಜಿಸಿದ್ದ ‘ತ್ಯಾಗದ ತೊಟ್ಟಿಲು’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕಲಾವಿದರ ಅಭಿನಯ ಸಮಾಜದ ಮೇಲೆ ಪರಿಣಾಮ ಬೀರುವಂತಿರಬೇಕು. ನಾಟಕದಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಮೋಜು, ಮಸ್ತಿಗಳಿಂದ ದೂರವಿರಬೇಕು ಎಂದರು. ಕವಿ ಸಿದ್ದಲಿಂಗಯ್ಯಸ್ವಾಮಿ, ಹಿನ್ನೆಲೆ ಗಾಯಕ ಸಿದ್ದಯ್ಯಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net