

ಹೂವಿನಹಡಗಲಿ: ಕ್ರೀಡೆಯಿಂದ ಮಕ್ಕಳಲ್ಲಿ ಮಾನಸಿಕ, ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ ಎಂದು ಸರ್ವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಬಡ್ಡಿ ಆಟದಲ್ಲಿ ವಿಜೇತರಾದ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದರು. ಗ್ರಾಮೀಣ ಆಟಗಳಾದ ಖೋಖೋ, ಕಬಡ್ಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬೆಳೆಯಬೇಕು. ಪ್ರತಿಯೊಬ್ಬರೂ ದೇಶಿಯ ಆಟಗಳತ್ತ ಗಮನಹರಿಸಬೇಕು ಎಂದರು.
ಉಪ ಪ್ರಾಚಾರ್ಯ ಪಿ.ಪ್ರಕಾಶ್ ಮಾತನಾಡಿದರು. ಪ್ರಥಮ ಸ್ಥಾನ ಸೋವೇನಹಳ್ಳಿ ಎಂಎಂಜಿ ಪ್ರೌಢ ಶಾಲೆ, ದ್ವಿತೀಯ ಸ್ಥಾನ ಪಡೆದ ಜಿಪಿಜಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಟ್ರೋಫಿ ವಿತರಿಸಲಾಯಿತು.
ಎಎಸ್‌ಐ ಬಿ.ಎಸ್.ವಾಸು, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಫಿ ಖವಾಸ್, ಗೌರವಾಧ್ಯಕ್ಷ ಶಿವಾನಂದಪ್ಪ, ನಿವೃತ್ತ ಮುಖ್ಯ ಶಿಕ್ಷಕ ಸಿ.ಡಿ.ಲಿಂಗಶೆಟ್ಟರ್, ಶಿಕ್ಷಕರಾದ ಪಿ.ಎನ್.ಪಾಟೀಲ್, ನಾಗರಾಜ್, ಕೃಷ್ಣಪ್ಪ, ರಶೀದಾ ಬೇಗಂ ಇತರರಿದ್ದರು.