

ಅಳವಂಡಿ: ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸಲು ಮುಂದಾಗಬೇಕು ಎಂದು ಶ್ರೀ ಸಿದ್ದೇಶ್ವರ ಮಠದ ಶ್ರೀ ಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.
ಗ್ರಾಮದ ಸಮುದಾಯ ಭವನದಲ್ಲಿ ವಿಶ್ವ ಸ್ನೇಹಿತರ ದಿನಾಚರಣೆ ಅಂಗವಾಗಿ ಕೊಪ್ಪಳ ಸಂಜೀವಿನಿ ರಕ್ತನಿಧಿ ಕೇಂದ್ರ, ಅನ್ವರ ಗಡಾದ ಗೆಳೆಯರ ಬಳಗದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಆರೋಗ್ಯಕರ ಜೀವನ ನಡೆಸಬಹುದು. ಇನ್ನೊಬ್ಬರ ಜೀವ ರಕ್ಷಿಸುವ ಶಕ್ತಿ ರಕ್ತದಲ್ಲಿದೆ. ಯುವಕರು ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಮುಂದಾಗಬೇಕು ಎಂದರು.
ಇದನ್ನೂ ಓದಿ: ಜೀವ ಉಳಿವಿಗೆ ರಕ್ತದಾನ ಮಾಡಿ
ಗ್ರಾಪಂ ಸದಸ್ಯ ಅನ್ವರ ಗಡಾದ ಮಾತನಾಡಿ, ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ ತುರ್ತು ಸಂದರ್ಭಗಳಲ್ಲಿ ಇನ್ನೊಬ್ಬರ ಜೀವನ ಉಳಿಸಿದ ಸಮಾಧಾನ ಸಿಗಲಿದೆ. ಯುವ ಜನತೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಪ್ರಮುಖರಾದ ಅರವಿಂದ ಬಿರಾದಾರ, ರೇಣುಕಪ್ಪ, ಬೀಮೇಶಪ್ಪ, ಪರಶುರಾಮ, ಪಾಂಡು, ಶಿವಾನಂದ ಮೋದಿನಸಾಬ, ಇಸ್ಮಾಯಿಲ್, ಮೈಬೂ, ಮಂಜುನಾಥ, ಈಶಪ್ಪ, ಪ್ರಕಾಶಸ್ವಾಮಿ, ಶಿವು, ದುದ್ದು, ಜಾಪರ್, ನಜೀರ, ಸಚಿನ, ವಿಶ್ವನಾಥ, ಅಲ್ಲಾಭಕ್ಷಿ, ರಾಮಕೃಷ್ಣ, ಇಮಾಮಸಾಬ, ಚನ್ನಪ್ಪ ಮುತ್ತಾಳ, ಪ್ರಭು ಇದ್ದರು.