ಪ್ರತಿಯೊಬ್ಬರು ರಕ್ತದಾನ ಮಾಡಿ

2 KURUGODU 3
ಕುರುಗೋಡು ಸಮೀಪದ ವಿರಾಪುರ ಗ್ರಾಮದಲ್ಲಿ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ ನಡೆಯಿತು. ಗ್ರಾಪಂ ಅಧ್ಯಕ್ಷೆ ಭಾಗ್ಯಶ್ರೀ, ತಾಪಂ ಮಾಜಿ ಉಪಾಧ್ಯಕ್ಷ ಬಸವರಾಜಗೌಡ, ಪಿಡಿಒ ಮಂಜುನಾಥ, ವೈದ್ಯಧಿಕಾರಿ ಲಕ್ಷ್ಮಣ್ ನಾಯಕ್, ಅರೋಗ್ಯ ಶಿಕ್ಷಣ ಸಂಯೋಜಕ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಎಚ್.ಬಿ.ಮಂಜು, ಎಚ್.ಹೊನ್ನೂರಪ್ಪ, ಸಣ್ಣ ಮಾರೆಪ್ಪ, ಲಕ್ಷ್ಮೀ, ಕಾರ್ಯದರ್ಶಿ ಬಸವರಾಜ್, ಗ್ರಾಪಂ ಮಾಜಿ ಉಪಾಧ್ಯಕ್ಷ ಅಂಬಣ್ಣ ಇದ್ದರು.
Published on

ಕುರುಗೋಡು: ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ವೈದ್ಯಧಿಕಾರಿ ಡಾ.ಲಕ್ಷ್ಮಣ ನಾಯಕ್ ಹೇಳಿದರು.

ಸಮೀಪದ ಎಚ್.ವಿರಾಪುರ ಗ್ರಾಮದಲ್ಲಿ ಅರೋಗ್ಯ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ರಕ್ತ ಬಂಡಾರ ಬಳ್ಳಾರಿ ಹಾಗೂ ಗ್ರಾಪಂ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಆರೋಗ್ಯಮೇಳ, ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು, ರಕ್ತದಾನವು ಶ್ರೇಷ್ಠ ದಾನವಾಗಿದ್ದು,

ಆರೋಗ್ಯವಂತರೆಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವು ಮೂಲಕ ಹಲವು ಜೀವಗಳನ್ನು ಉಳಿಸಿ ಎಂದರು. 50 ಜನರಕ್ತದಾನ, 15 ಜನ ಅಂಗಾಂಗ ದಾನ ನೋಂದಣಿ, 30 ಜನರಿಗೆ ಅಭಾಕಾರ್ಡ್ ನೊಂದಣಿ ಮಾಡಲಾಯಿತು.

ಗ್ರಾಪಂ ಅಧ್ಯಕ್ಷೆ ಭಾಗ್ಯಶ್ರೀ, ತಾಪಂ ಮಾಜಿ ಉಪಾಧ್ಯಕ್ಷ ಬಸವರಾಜಗೌಡ, ಪಿಡಿಒ ಮಂಜುನಾಥ, ವೈದ್ಯಧಿಕಾರಿ ಲಕ್ಷ್ಮಣ್ ನಾಯಕ್, ಅರೋಗ್ಯ ಶಿಕ್ಷಣ ಸಂಯೋಜಕ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಎಚ್.ಬಿ.ಮಂಜು, ಎಚ್.ಹೊನ್ನೂರಪ್ಪ, ಕಾರ್ಯದರ್ಶಿ ಬಸವರಾಜ್, ಗ್ರಾಪಂ ಮಾಜಿ ಉಪಾಧ್ಯಕ್ಷ ಅಂಬಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net