ಪ್ರತಿಯೊಬ್ಬರೂ ದಾನ ಪ್ರವೃತ್ತಿ ಬೆಳಸಿಕೊಳ್ಳಿ

25 KKNR 01
ಕುಕನೂರಿನಲ್ಲಿ ಶ್ರೀ ನೀಲಗುಂದ ಗುದ್ನೇಶ್ವರ ಸ್ವಾಮೀಜಿಗಳ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ನೀಲಗುಂದ-ಗುದ್ನೆಪ್ಪನಮಠದ ಶ್ರೀ ಪ್ರಭುಲಿಂಗ ದೇವರು, ಡಾ.ಮಹಾದೇವ ಸ್ವಾಮೀಜಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪ್ರಮುಖರಾದ ಗುದ್ನೆಯ್ಯ ಬಂಡಿಮಠ, ಬಸವನಗೌಡ ತೊಂಡಿಹಾಳ, ಸಚಿನ ಆಚಾರ್ ಇದ್ದರು.
Published on

ಕುಕನೂರು: ಬದುಕಿನಲ್ಲಿ ಸದಾಚಾರ, ಸದ್ಗತಿ ಇದ್ದರೆ ಯಾವುದೇ ಕೊರತೆಯಾಗದು ಎಂದು ನೀಲಗುಂದ-ಗುದ್ನೆಪ್ಪನಮಠದ ಶ್ರೀ ಪ್ರಭುಲಿಂಗ ದೇವರು ಹೇಳಿದರು.

ಪಟ್ಟಣದ ಗುದ್ನೆಪ್ಪನಮಠದ ನೀಲಗುಂದ ಮಠದಲ್ಲಿ ಶ್ರೀ ನೀಲಗುಂದ ಗುದ್ನೆಶ್ವರ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಧಾರ್ಮಿಕ ಹಾಗೂ 11 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಮಾತ್ಮನ ಮೇಲೆ ಶ್ರದ್ಧೆ ಇಟ್ಟರೆ ಮನುಷ್ಯ ಜೀವಾತ್ಮನಾಗುತ್ತಾನೆ. ಬದುಕಿನ ಜತೆಗೆ ದೇವರನ್ನು ಸಹ ಪ್ರೀತಿಸಬೇಕು. ಈ ಪ್ರಪಚಂದಲ್ಲಿ ಎಲ್ಲವೂ ಅಸ್ಥಿರವಾಗಿದ್ದು, ಸಾಮಾಜಿಕ ಕಲ್ಯಾಣ ಕಾರ್ಯ ಮಾತ್ರ ಶಾಶ್ವತವಾಗಿದೆ. ಸದಾಚಾರದಿಂದ ಬದುಕಿ ದುಡಿದು ಊಟ ಮಾಡಬೇಕು. ಉಳಿದಿದ್ದರಲ್ಲಿ ದಾನ ಮಾಡಬೇಕು ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಗುದ್ನೆಪ್ಪನಮಠ ನಿವಾಸಿಗಳು ದಾನದ ಶ್ರೇಷ್ಠತೆ ಅರಿತಿದ್ದಾರೆ. ಸಾಮೂಹಿಕ ವಿವಾಹ ಕಾರ್ಯದಿಂದ ಬಡವರ್ಗದ ಜನರಿಗೆ ಅನುಕೂಲವಾಗಲಿದೆ ಎಂದರು.

ನವೋದಯ ಶಾಲೆ ಪ್ರಾಚಾರ್ಯರ ಜಯಾ, ಪ್ರಮುಖರಾದ ಸಚಿನ ಆಚಾರ್, ಚನ್ನಬಸಯ್ಯ ಧೂಪದ, ಸಿದ್ದಲಿಂಗಯ್ಯ ಬಂಡಿಮಠ, ರುದ್ರಯ್ಯ ಗಲಬಿ, ವೀರಯ್ಯ ದೇವಗಣಮಠ, ಜಗನ್ನಾಥ ಭೋವಿ, ಎಎಸ್‌ಐ ನಿರಂಜನ ತಳವಾರ, ರುದ್ರಯ್ಯ ಇನಾಮದಾರ, ಶಶಿಕುಮಾರ, ಶಿವು, ಶರಣಯ್ಯ ಹಳೆಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net