ಕನ್ನಡದ ಸೇವೆಗೆ ಎಲ್ಲರೂ ಮುಂದಾಗಿ

Everyone comes forward to serve Kannada.
ರಬಕವಿ ನಗರದಲ್ಲಿ ಆಟೋ ಚಾಲಕರಿಂದ ಅದ್ದೂರಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಹಮದಹುಸೇನ್ ಲೆಂಗ್ರೆ, ಪರಪ್ಪ ಪೂಜಾರಿ ಇದ್ದರು.
Published on

ರಬಕವಿ-ಬನಹಟ್ಟಿ: ಪ್ರತಿಯೊಬ್ಬರು ಕನ್ನಡ ಮಾತೆಗೆ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ರಬಕವಿ ಬನಹಟ್ಟಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಹ್ಮದ್‌ಹುಸೇನ್ ಲೆಂಗ್ರೆ ಹೇಳಿದರು.

ರಬಕವಿ ಬನಹಟ್ಟಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಆಚರಿಸಿದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರಬಕವಿ ಹೊಸ ಬಸ್ ನಿಲ್ದಾಣದಿಂದ 200ಕ್ಕೂ ಹೆಚ್ಚು ಆಟೋಗಳ ಮೆರವಣಿಗೆ ಮಾಡಲಾಯಿತು.

ಮಾರುತಿ ನಾಯಿಕ, ಪರಪ್ಪ ಪೂಜಾರಿ, ಉಮೇಶ ಜಗದಾಳ, ಕೆಂಪಯ್ಯ ಅಣ್ಣಾ, ಮಂಜು ಕಳ್ಳಿಮನಿ, ರವಿ ವಾಗಮೋರೆ, ವಸಂತ ಪವಾಡೆ, ಮುತ್ತಪ್ಪ ಮುತ್ತೂರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net