ಎಲ್ಲರೂ ಶಾಂತಿಯುತವಾಗಿ ಆಚರಿಸಿ

ಹೂಲಗೇರಾ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೊಹರಂ ಶಾಂತಿ ಸಭೆಯಲ್ಲಿ ಪಿಎಸ್‌ಐ ಧನುಂಜಯ ಹಿರೇಮಠ ಮಾತನಾಡಿದರು. ಪ್ರಮುಖರಾದ ಬಸಲಿಂಗಯ್ಯ ಸೊಪ್ಪಿಮಠ, ಮುತ್ತಣ್ಣ ಕರಡಿ, ಪ್ರಕಾಶ ರಾಠೋಡ, ರವಿಕುಮಾರ ಚವ್ಹಾಣ, ಹನುಮಪ್ಪ ಗೊರೆಬಾಳ, ಚಂದ್ರಶೇಖರ ಇತರರಿದ್ದರು.

Published on

ಹನುಮಸಾಗರ: ಹಿಂದು-ಮುಸ್ಲಿಂ ಭಾವೈಕ್ಯದ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಪಿಎಸ್‌ಐ ಧನುಂಜಯ ಹಿರೇಮಠ ಹೇಳಿದರು.

ಸಮೀಪದ ಹೂಲಗೇರಾ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದರು. ಮೊಹರಂ ಹಬ್ಬದ ವೇಳೆ ಯಾರೂ ವೈಯಕ್ತಿಕ ವಿಚಾರಗಳಿಂದ ಗಲಾಟೆ ಮಾಡಬಾರದು. ಶಾಂತಿ-ಸೌಹಾರ್ದದಿಂದ ಆಚರಣೆಯಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಅಹಿತಕರ ಘಟನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ಸಿಬ್ಬಂದಿ ಮೈಬೂಬಸಾಬ್ ನಧಾಫ್, ಸಿದ್ದು ಬೋವಿ, ಪ್ರಮುಖರಾದ ಬಸಲಿಂಗಯ್ಯ ಸೊಪ್ಪಿಮಠ, ಮುತ್ತಣ್ಣ ಕರಡಿ, ಪ್ರಕಾಶ ರಾಠೋಡ, ರವಿಕುಮಾರ ಚವ್ಹಾಣ, ಹನುಮಪ್ಪ ಗೊರೆಬಾಳ, ಚಂದ್ರಶೇಖರ, ಕಾಳಪ್ಪ, ಮುತ್ತುರಾಜ ರಾಠೋಡ, ರವಿ ಪಾಟೀಲ್, ಪ್ರಲ್ಹಾದ ಮಾಲಗಿತ್ತಿ, ಮಲಕಪ್ಪ ಗಾಣಗೇರ, ಹಸನಸಾಬ, ವೈ.ಎಫ್.ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net