ಸಂಶೋಧನೆಗೆ ಪ್ರತಿ ಕೃತಿಯೂ ಪರಿಕರ

1
Published on

ಮೈಸೂರು: ಸಾಹಿತ್ಯದ ವಸ್ತುಮೂಲ ತಿಳಿಯಲು ಸಂಶೋಧನೆ ಅಗತ್ಯ ಎಂದು ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ವಿ.ವಸಂತಕುಮಾರ್ ಹೇಳಿದರು.

ಸಾಹಿತ್ಯ ಅಕಾಡೆಮಿ ಮತ್ತು ಮಹಾರಾಣಿ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ವತಿಯಿಂದ ಮಹಾರಾಣಿ ಕಲಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಸಂಶೋಧನೆಯ ವಿವಿಧ ಆಯಾಮಗಳು’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸಂಶೋಧನೆ ಎಂಬುದು ತಪಸ್ಸು ಇದ್ದಂತೆ. ವಿಸ್ತಾರವಾದ ಓದು, ಸಮರ್ಪಕ ಟಿಪ್ಪಣಿ ಒದಗಿಸುವುದು, ಆಳವಾದ ಅಧ್ಯಯನದ ಅಗತ್ಯವಿದೆ. ವಿಷಯಗಳನ್ನು ಪ್ರಕಟಿಸುವಾಗ ಕರಾರುವಕ್ಕಾದ ಮಾಹಿತಿ ಇಡಬೇಕು. ಸೃಜನಶೀಲತೆ, ಸಹಜ ಸಾಹಿತ್ಯ ಎಂಬ ವರ್ಗೀಕರಣ ಸರಿಯಲ್ಲ. ಸಂಶೋಧನೆಗೆ ಪ್ರತಿ ಕೃತಿಯೂ ಪರಿಕರವಾಗಬಲ್ಲದು ಎಂದರು.

ಸಂಶೋಧಕರು ಅಂತರ್ಜಾಲ ಆಧರಿಸಿ ಅಧ್ಯಯನ ನಡೆಸುವುದು ಕಡಿಮೆಯಾಗಬೇಕು. ಸಾಹಿತ್ಯಗಳ ಸಮಗ್ರ ಅಧ್ಯಯನ ನಡೆಯಬೇಕು ಎಂದರು.
ಸಾಹಿತ್ಯ ಅಕಾಡೆಮಿಯ ಉಸ್ತುವಾರಿ ಅಧಿಕಾರಿ ಎಸ್.ರಾಜಮೋಹನ್, ಕನ್ನಡ ಸಲಹಾ ಸಮಿತಿ ಸಂಚಾಲಕ ಬಸವರಾಜ ಕಲ್ಗುಡಿ, ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಂಯೋಜಕಿ ಎಚ್.ಎಂ.ಕಲಾಶ್ರೀ, ಸಹಾಯಕ ಪ್ರಾಧ್ಯಾಪಕ ಎಂ.ನಂಜುಂಡಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net