ಪ್ರತಿಯೊಬ್ಬ ಮಹಿಳೆಯು ಆರ್ಥಿಕವಾಗಿ ಸಬಲರಾಗಬೇಕು: ಶುಭ

mahila dinacharane
Published on

ಮಡಿಕೇರಿ: ಹೆಣ್ಣು ಆರ್ಥಿಕವಾಗಿ ಸಬಲರಾದಾಗ ಮಾತ್ರ ಧೈರ್ಯವಾಗಿ ಬಾಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ್ತ್ರೀಶಕ್ತಿ ಬ್ಲಾಕ್ ಒಕ್ಕೂಟ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸ್ತ್ರೀಶಕ್ತಿ ಭವನದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮ, ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ದಿನಾಚರಣೆಯು ದಿನಕ್ಕೆ, ತಿಂಗಳಿಗೆ ಸೀಮಿತವಾಗದೆ ಪ್ರತಿದಿನವೂ ಆಚರಣೆ ಆಗಬೇಕು. ಹೆಣ್ಣು ಆರ್ಥಿಕವಾಗಿ ಸಬಲರಾದಾಗ ಮಾತ್ರ ಧೈರ್ಯವಾಗಿ ಬಾಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ವಿದ್ಯೆ ಕೊಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಹೆಣ್ಣಿಗೆ ಮಿತ್ರಳಾಗಿರಬೇಕು ಶತ್ರುವಾಗಬಾರದು. ಒಬ್ಬ ಮಹಿಳೆ ಇನ್ನೊಬ್ಬರಿಗೆ ಸಹಕಾರ ಮಾಡಬೇಕು. ದಯೆ, ತಾಳ್ಮೆ ಸಹನಾಶೀಲತೆಗೆ ಹೆಸರಾದ ಹೆಣ್ಣು ಅಹಂಕಾರ ತ್ಯಜಿಸಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಗೌರವದೊಂದಿಗೆ ಜೀವನವನ್ನು ನಡೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಜಲ ದಿನಾಚರಣೆ ಮಾರ್ಚ್ ತಿಂಗಳಲ್ಲೇ ಬರುವುದರಿಂದ ಜಲ ಸಂರಕ್ಷಣೆಯು ಕೂಡ ಮಹಿಳೆಯರ ಪಾತ್ರ ಹೆಚ್ಚಾಗಿದೆ. ಪ್ರತಿದಿನ ನೀರನ್ನು ಹೆಚ್ಚು ಉಪಯೋಗಿಸದೆ ಅವಶ್ಯಕತೆಗೆ ಅನುಗುಣವಾಗಿ ಬಳಸಬೇಕು. ಹೆಚ್ಚು ಮಲೀನಗೊಳಿಸಬಾರದು ಹೆಚ್ಚು ನೀರನ್ನು ವ್ಯಯಗೊಳಿಸಬಾರದು. ಜೀವ ಜಲ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯ ಸುಮತಿ ಮಾತನಾಡಿ, ಆಧುನಿಕತೆಯೊಂದಿಗೆ ಸಂಸ್ಕಾರ ಸಂಸ್ಕೃತಿ ಉಳಿಯಬೇಕೆಂದರೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳದೆ ನಿಯಮ ಬದ್ಧರಾಗಿ ನಡೆಯಬೇಕು ಎಂದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ ಅವರು ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಶ್ರೀಶಕ್ತಿ ಗುಂಪಿನ ಎಲ್ಲಾ ಸದಸ್ಯರು ಆರ್ಥಿಕವಾಗಿ ಸದೃಢರಾಗಲು ಭವಿ?್ಯದಲ್ಲಿ ತಮ್ಮ ಉಳಿತಾಯವನ್ನು ಹೆಚ್ಚಿಸಲು ಬೇಕಾದಂತಹ ಸಲಹೆ ನೀಡಿದರು.

ತಾಲೂಕು ಶ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಪು?್ಪ ಅವರು, ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ತಾಲೂಕು ಒಕ್ಕೂಟದ ಹತ್ತು ಸದಸ್ಯರನ್ನು ಶ್ಲಾಘಿಸಿದ ಅವರು, ಒಗ್ಗಟ್ಟಿನಲ್ಲಿ ಬಲವಿದೆ. ಮಹಿಳೆಯರೆಲ್ಲ ಒಗ್ಗಟ್ಟಾಗಿ ಇರುವಂತೆ ಕರೆ ನೀಡಿದರು.

ಕಾರ್ಯಕ್ರಮಲ್ಲಿ ಹಲವಾರು ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರಾದ ಮೇಕೇರಿ ಅಂಗನವಾಡಿ ಕಾರ್ಯಕರ್ತೆ ಪಿ.ಎಸ್.ಹೇಮಲತಾ ಮತ್ತು ಹಳೆ ತಾಲೂಕು ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ ಅನಿಲ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಕೆ.ಈ.ಭೋಜಕ್ಕಿ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಒಕ್ಕೂಟದ ಸದಸ್ಯರಾದ ರೂಪ, ಅನಿತಾ, ಪು?್ಪಾವತಿ, ಆಶಾಲತಾ, ಜಲಜಾಕ್ಷಿ, ಗೀತಾ, ಶಾಂತಿ, ತಾರಾಮಣಿ, ರತ್ನಾವತಿ, ಬೊಜಕ್ಕಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net