ಮಾಲೂರಿನ ಪ್ರತಿ ಗ್ರಾಮಕ್ಕೂ ನಗರ ಸ್ಪರ್ಶ

26 MALUR 1
Published on

ಮಾಲೂರು: ಸ್ಥಳಿಯ ಯೋಜನಾ ಪ್ರದೇಶದ ವಿಸ್ತೀರ್ಣದಿಂದ ಮುಂದಿನ ದಿನಗಳಲ್ಲಿ ಮಾಲೂರು ತಾಲೂಕಿನ ಪ್ರತಿಯೊಂದು ಗ್ರಾಮವು ನಗರ ಪ್ರದೇಶವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಪಟ್ಟಣದ ಯೋಜನಾ ಪ್ರಾಧಿಕಾರದ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 115 ಗ್ರಾಮಗಳನ್ನು ಒಳಗೊಂಡಂತೆ ಸ್ಥಳಿಯ ಯೋಜನಾ ಪ್ರದೇಶವನ್ನು ರಚಿಸಲಾಗಿದ್ದು, 204.32 ಚ.ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಹೊಂದಿತ್ತು. ಈಗ ಹಾಲಿ ಇರುವ 115 ಗ್ರಾಮಗಳ ಜತೆಗೆ 279 ಗ್ರಾಮಗಳನ್ನು ಸೇರಿಸಿಕೊಂಡು 394 ಗ್ರಾಮಗಳಿಗೆ ಮಾಲೂರು ಸ್ಥಳಿಯ ಯೋಜನಾ ಪ್ರದೇಶವನ್ನು ವಿಸ್ತರಿಸಲಾಗಿದ್ದು, 643.34 ಚ.ಕಿ.ಮೀ. ವ್ಯಾಪ್ತಿ ಹೊಂದಿದೆ. ಇದು ಮಹಾ ಯೋಜನೆಯಾಗಿದ್ದು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯಂತಹ ವಿವಿಧ ಅಂಶ ಒಳಗೊಂಡಿದೆ ಎಂದರು.

ಸ್ಥಳಿಯ ಯೋಜನಾ ಪ್ರದೇಶದ ವಿಸ್ತರಣೆಯಿಂದ ವ್ಯವಸಾಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಜತೆಗೆ ರೈತರ ಭೂಮಿಗೆ ಉತ್ತಮ ಮಾರುಕಟ್ಟೆ ಬೆಲೆ ದೊರಕುತ್ತದೆ ಎಂದರು.

ಮಾಲೂರು ತಾಲೂಕು ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಮಹಾ ಯೋಜನೆಯು ತಾಲೂಕಿನ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ. ಪ್ರದೇಶದ ಅಭಿವೃದ್ಧಿ ಮಾತ್ರವಲ್ಲದೆ, ಆ ಪ್ರದೇಶದಲ್ಲಿ ವಾಸಿಸುವ ಜನರ ಜೀವನಮಟ್ಟ ಸುಧಾರಿಸಲು ಸಹಾಯಕವಾಗಿದೆ ಎಂದರು.

ಕೋಲಾರ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ತಾಲೂಕಿನಿಂದ 3 ನಿರ್ದೇಶಕರಾಗಿದ್ದು, ಈಗಾಗಲೇ ಕೋಲಾರ ಹಾಲು ಒಕ್ಕೂಟದಲ್ಲಿ 2 ಬಾರಿ ಅಧ್ಯಕ್ಷನಾಗಿದ್ದ ನನ್ನನ್ನು 3ನೇ ಬಾರಿಯೂ ನಿರ್ದೇಶಕರಾಗಿ ಅವಿರೋಧ ಆಯ್ಕೆ ಮಾಡಿದ್ದು ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್​ ನಯಿಮ್​ ಉಲ್ಲಾ ಮಾತನಾಡಿ, ಶಾಸಕರು ಮಾಲೂರು ತಾಲೂಕನ್ನು ನವ ಮಾಲೂರು ತಾಲೂಕಾಗಿ ನಿಮಾರ್ಣ ಮಾಡಲು ಮುಂದಾಗಿರುವುದು ಒಂದು ಮೈಲುಗಲ್ಲಾಗಿದೆ.

ಕೆರೆ ಅಭಿವೃದ್ಧಿ, ಬಸ್​ ನಿಲ್ದಾಣ, ಆಸ್ಪತ್ರೆ, ಕಸ ವಿಲೇವಾರಿ ಘಟಕ, ್ಲೆ$ ಓವರ್​, ಇಂದಿರಾ ಕ್ಯಾಂಟೀನ್​ ಪ್ರಾರಂಭೋತ್ಸವ, ಯೋಜನಾ ಪ್ರಾಧಿಕಾರದ ವಿಸ್ತೀರ್ಣವು ಹಾಲಿ ಇರುವ 115 ಗ್ರಾಮಗಳ ಜತೆಗೆ 279 ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟು 394 ಕಂದಾಯ ಗ್ರಾಮಗಳು ಮಾಲೂರಿನ ಯೋಜನಾ ಪ್ರಾಧಿಕಾರಕ್ಕೆ ಒಳಪಡುತ್ತವೆ. ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿಯೂ ಕೆರೆ, ಉದ್ಯಾನವನ, ನೀರಾವರಿ ಯೋಜನೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ನಿರ್ದೇಶಕರಾದ ನಾಗರಾಜ್​, ಮಂಜುನಾಥ್​ರೆಡ್ಡಿ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ವಿಜಯನರಸಿಂಹ, ಎಂ.ಜಿ.ಮಧುಸೂದನ್​, ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣಪ್ಪ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಸದಸ್ಯ ಇಮ್ತಿಯಾಜ್​ ಖಾನ್​, ಹಾಲು ಒಕ್ಕೂಟದ ನಿರ್ದೇಶಕರಾದ ಕಾಂತಮ್ಮ, ಶ್ರೀನಿವಾಸ್​, ಮಾಜಿ ಯೋಜನಾ ಪ್ರಾಧಿಕಾರದ ನಿರ್ದೇಶಕ ಎಂ.ಎಂ.ಶಬ್ಬೀರ್​ ಉಲ್ಲಾ ಇದ್ದರು.

27 ಮಾಲೂರು 0 1

ಮಾಲೂರು ಪಟ್ಟಣದ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಅಭಿನಂದಿಸಲಾಯಿತು. ಪುರಸಭೆ ಅಧ್ಯೆ ವಿಜಯಲಕ್ಷಿ$್ಮ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್​ ನಯೀಮ್​ ಉಲ್ಲಾ, ನಿರ್ದೇಶಕರಾದ ಬುಲೆಟ್​ ವೆಂಕಟೇಶ್​, ಚಿರಂಜೀವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net