ಪ್ರತಿಹಳ್ಳಿಗೂ ಇದೆ ಸಾಂಸ್ಕೃತಿಕ ಹಿನ್ನಲೆ

FotoJet222222
Published on

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುವಾರ್ ನೀಹ ಹೇಳಿಕೆ

ಕೊರಟಗೆರೆ: ಇತಿಹಾಸ ಇಲ್ಲದೆ ಪ್ರಸ್ತುತ ವಿದ್ಯವಾನಗಳಿಲ್ಲ. ಪ್ರತಿ ಹಳ್ಳಿಗೂ ತನ್ನದೇ ಅದ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನಲೆ ಇದ್ದೆ ಇರುತ್ತದೆ. ಇಂದಿನ ಪೀಳಿಗೆ ಅದನ್ನು ಅರಿತುಕೊಂಡು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವಂತಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುವಾರ್ ನೀಹ ತಿಳಿಸಿದರು.

ಪಟ್ಟಣದ ರವೀಂದ್ರ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ತಾಲೂಕು ಕಸಾಪದಿಂದ ಆಯೋಜಿಸಿದ್ದ ಕಸಾಪ ನಡೆ ಯುವ ಜನತೆ ಕಡೆ ಹಾಗೂ ಕಾಲೇಜಿಗೊಂದು ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ಶಿಲಾಯುಗದ ಜನರು ವಾಸವಾಗಿದ್ದರು ಎಂಬುದಕ್ಕೆ ಅನೇಕ ನಿದರ್ಶನಗಳು ಸಿಕ್ಕಿವೆ. ತಾಲೂಕಿನ ನೀಲಗೊಂಡನಹಳ್ಳಿ, ಕುರಂಕೋಟೆ, ಹೊಲತಾಳು, ತೋವಿನಕೆರೆ, ಹೊಳವನಹಳ್ಳಿಗಳಿಗೆ ಅದರದೇ ಆದ ಸಂಸ್ಕೃತಿ ಹಿನ್ನೆಲೆ ಇದೆ, ಜಯಮಂಗಲಿ ನದಿ ಪಾತ್ರದಲ್ಲಿ ಜನಮೂಲವನ್ನು ಆಶ್ರಯಿಸಿ ಶಿಲಾಯುಗದ ಜನ ವಾಸವಿದ್ದರು ಎಂಬುದಕ್ಕೆ ಅನೇಕ ಕುರುಹುಗಳು ಸಿಕ್ಕಿವೆ. ಹೊಳವನಹಳ್ಳಿಯ ಪಾಳೆಗಾರರು, ಕೊರಟಗೆರೆ ರಣಬೈರೇಗೌಡ ಹಾಗೂ ಕುರಂಕೋಟೆಯ ಕುರಂಗರಾಜ ಆಳ್ವಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಾಹಿತಿ ನೀಡಿದರು.

ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಈರಣ್ಣ ವಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಉಳಿಸುವ ಜವಾಬ್ದಾರಿ ಯುವಕರ ಮೇಲಿದೆ, ಶೈಕ್ಷಣಿಕವಾಗಿ ಹೆಚ್ಚು ಕನ್ನಡವನ್ನು ಬೆಳೆಸಬೇಕಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net