ಪ್ರತಿಯೊಬ್ಬ ವಿದ್ಯಾರ್ಥಿಗೂ ಬೇಕು ಕಾನೂನು ತಿಳಿವಳಿಕೆ

NRD NSS
Published on

ನರಗುಂದ: ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾನೂನು ಪಾಲನೆ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದು ದಿವಾಣಿ ನ್ಯಾಯಾಧೀಶ ಜೀನಪ್ಪ ಚೌಗಲಾ ತಿಳಿಸಿದರು.

ತಾಲೂಕಿನ ಕೊಣ್ಣೂರಿನ ಕೆಇಎಸ್ ಕಾಲೇಜ್ ವತಿಯಿಂದ ಕಲ್ಲಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಅನೇಕರು ನ್ಯಾಯದ ನಿಯಮಗಳನ್ನು ಅರಿತಿರುವುದಿಲ್ಲ. ಹೀಗಾಗಿ ಕಾನೂನು ನಿಯಮ ತಿಳಿವಳಿಕೆಗೆ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ನ್ಯಾಯಾಲಯದ ಆವರಣ, ತಹಸೀಲ್ದಾರ್ ಕಚೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ತೆರೆಯಲಾಗಿದ್ದು, ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಲೈಂಗಿಕ ದೌರ್ಜನ್ಯ ವಾದ ಪ್ರಕರಣಗಳನ್ನು ಮಹಿಳಾ ಸಹಾಯವಾಣಿ 1098ಕ್ಕೆ ಕರೆಮಾಡಿ ತಿಳಿಸಿದಲ್ಲಿ ಅಂತಹ ಪ್ರಕರಣಗಳನ್ನು ದಾಖಲಿಸಿಕೊಂಡು ನ್ಯಾಯ ಪಡೆಯಬಹುದಾಗಿದೆ ಎಂದರು.

ವಕೀಲರಾದ ರಮೇಶ ನಾಯ್ಕರ್, ಚಂದ್ರಗೌಡ ಪಾಟೀಲ, ಕೆಇಎಸ್ ಕಾಲೇಜಿನ ಪ್ರಾಚಾರ್ಯ ಕೆ.ಎಂ. ಮಾಕನ್ನವರ, ಕೊಣ್ಣೂರ ಶಿಕ್ಷಣ ಸಮಿತಿ ನಿರ್ದೇಶಕ ಯಲ್ಲಪ್ಪಗೌಡ ಶಿವಪೂರ, ಎನ್.ಕೆ. ಭಜಂತ್ರಿ ಮಾತನಾಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿ.ಎಸ್. ದೇಶಪಾಂಡೆ, ಜಿ.ಟಿ. ಪಾಟೀಲ, ಸಿ.ಬಿ. ಸುಬೇದಾರ, ರಾಜು ಹೊಸಮನಿ, ತಾಪಂ ಮಾಜಿ ಅಧ್ಯಕ್ಷ ಪಿ.ಎಲ್. ತಿರಕನಗೌಡ್ರ, ಎಚ್.ಎಸ್. ಶಿವಪ್ಪಯ್ಯನಮಠ, ಬಿ.ಎಫ್. ಕರಿಗಾರ, ಆರ್.ಎಲ್. ಜೂಲಿಕಟ್ಟಿ, ಎ.ಎಚ್. ವಾಸನ, ಇತರರಿದ್ದರು.

ಎ.ಕೆ. ಬಂಡಗಾರ, ಎಂ.ಡಿ. ಚಲವಾದಿ ಹಾಗೂ ಎಸ್.ಎಂ. ಚವ್ಹಾಣ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net