ಪ್ರತಿ ಸೋಮವಾರ ಕುಂದು&ಕೊರತೆ ಸಭೆ

30Huk2
Published on

ಹುಕ್ಕೇರಿ: ತಾಲೂಕು ಪಂಚಾಯಿ-ತಿ ಕಚೇರಿ ಆವರಣದಲ್ಲಿ ಮೂದಲಿ-ದ್ದ ಶಾಸಕರ ಕಚೇರಿ ಶಿಥಿಲಾವಸ್ಥೆ ತಲು-ಪಿದ ಕಾರಣ ಪಿಕಾರ್ಡ್​ ಬ್ಯಾಂಕ್​ ಮೇಲಂತಸ್ತಿನಲ್ಲಿ ಕಾರ್ಯಾಲಯ ಪ್ರಾರಂಭಿಸಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಪಟ್ಟಣದ ಪಿಕಾರ್ಡ್​ ಬ್ಯಾಂಕ್​ ಮೇಲಂತಸ್ತಿನಲ್ಲಿ ಬುಧ-ವಾರ ಹಮ್ಮಿ-ಕೊಂಡಿ-ದ್ದ ಶಾಸಕರ ಕಾರ್ಯಾಲಯ ಉದ್ಘಾಟನಾ ಕಾರ್ಯ-ಕ್ರ-ಮ-ದ-ಲ್ಲಿ ಮಾತನಾಡಿ, ಇಲ್ಲಿ ಪ್ರತಿ ಸೋಮವಾರ ೇತ್ರದ ಜನರ ಕುಂದು&ಕೊರತೆ ಆಲಿಸಿ ಪರಿಹರಿಸುತ್ತೇನೆ. ನಮ್ಮ ತಂದೆ ದಿ.ಉಮೇಶ ಕತ್ತಿ ಅವರು 8 ಬಾರಿ ಶಾಸಕರಾಗಿ ಸಚಿವರಾಗಿದ್ದಾಗಲೂ ಈ ಬ್ಯಾಂಕ್​ ಆವರಣದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದರು. ನಾನು ಅದೇ ಪದ್ದತಿ ಮುಂದುವರೆಸಿಕೊಂಡು ಬಂದಿರುವೆ ಎಂದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯ ಸತ್ತೆಪ್ಪ ನಾಯಿಕ ಶಾಸ-ಕ-ರ ಕಾರ್ಯಾ-ಲ-ಯ ಉದ್ಘಾ-ಟಿ-ಸಿ-ದ-ರು. ಮುಖಂಡರಿಂದ ಶಾಸಕ ನಿಖಿಲ ಕತ್ತಿ ಅವರನ್ನು ಸನ್ಮಾನಿಸಲಾ-ಯಿ-ತು. ಬಿಜೆಪಿ ಮಂಡಲ ಅಧ್ಯ ರಾಚಯ್ಯ ಹಿರೇಮಠ, ಮುಖಂಡರಾದ ಸತ್ತೆಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ರಾಜು ಮುನ್ನೋಳಿ, ಚನ್ನಪ್ಪ ಗಜಬರ, ಜ್ಯೋತಿಭಾ ದುಪ್ಪಟ್ಟಿ, ಮಾಯಪ್ಪ ಹೊಳೆಪ್ಪಗೋಳ, ಗೈಬುಸಾಬ್​ ಅಮ್ಮಣಗಿ ಇತ-ರ-ರಿ-ದ್ದ-ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net