

ಬಬಲೇಶ್ವರ : ಭೂಮಿಯಲ್ಲಿ ಪ್ರತಿಶತ 71ರಷ್ಟು ನೀರಿದ್ದರೂ ಅದರಲ್ಲಿ ಜೀವಿಗಳಿಗೆ ಉಪಯೋಗಕ್ಕೆ ಬರುವುದು ಕೇವಲ ಶೇ. 2ರಷ್ಟು ಮಾತ್ರ. ಆದ್ದರಿಂದ ನೀರನ್ನು ಅನವಶ್ಯ ಪೋಲುಮಾಡದೆ ಪ್ರತಿ ಮನೆಯಲ್ಲೂ ನೀರು ಕೊಯ್ಲು ಮಾಡಬೇಕು ಎಂದು ವಿಷಯ ಪರಿವೀಕ್ಷಕ ಸಿ.ಎಚ್. ಬಿರಾದಾರ ಸಲಹೆ ನೀಡಿದರು.
ತಾಲೂಕಿನ ಮಮದಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಜಲ ರಕ್ಷಣೆ ಕುರಿತಾಗಿ ಜನತೆಯಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ "ಜಲಧೂತ' ಆಂದೋಲನ& ಮಕ್ಕಳ ಪ್ರಭಾತ ಫೇರಿಗೂ ಮೊದಲು ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೂಮಟ್ಟಿ ಪ್ರಭಾತಫೇರಿಗೆ ಚಾಲನೆ ನೀಡಿ ಮಾತನಾಡಿ, ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಮುಂದಿನ ಪೀಳಿಗೆಗೆ ಜಲ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ವಿಜ್ಞಾನ ಶಿಕ್ಷಕಿ ಎಸ್.ವಿ. ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಾಚಾರ್ಯ ರಾವೇಂದ್ರ ಪುರೋಹಿತ ಮಾತನಾಡಿ, ನೀರಿನ ಸಂರಕ್ಷಣೆ ಅತ್ಯಂತ ಅವಶ್ಯವಾಗಿದ್ದು ಎಲ್ಲರೂ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದರು. ಮಕ್ಕಳಿಂದ "ನೀರಿನ ಕೊಯ್ಲು' ಬೀದಿ ನಾಟಕ, ರೂಪಕ ಪ್ರದರ್ಶನ ನಡೆಯಿತು.
ಶಿಕ್ಷಣ ಸಂಯೋಜಕ ಸುರೇಶ ರಾಠೋಡ, ಸಿಆರ್ಪಿ ಎಸ್.ಎಸ್. ಕಾಂಬಳೆ, ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಸದಸ್ಯರು, ಶಿಕ್ಷಕರು, 800ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.