ಪ್ರತಿ ಮನೆಗೂ ಶುದ್ಧ ನೀರು ಪೂರೈಕೆ

5kabbur1
Published on

ಕಬ್ಬೂರ: ಮಾನವನ ಜೀವನಕ್ಕೆ ನೀರು ಅತ್ಯಮೂಲ್ಯವಾಗಿದ್ದು, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯದ ಆಶ್ರಯದಲ್ಲಿ ಅಮೃತ 2.0 ಯೋಜನೆಯಡಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ 22.25 ಕೋಟಿ ರೂ. ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಘಟಪ್ರಭಾ ನದಿಯಿಂದ ಕಬ್ಬೂರ ಪಟ್ಟಣಕ್ಕೆ ಪೈಪ್‌ಲೈನ್ ಮೂಲಕ ಶುದ್ಧ ಕುಡಿಯುವ ನೀರಿನ ಯೋಜನೆ ಇದಾಗಿದೆ. ಸದ್ಯ ಕಬ್ಬೂರ ಪಟ್ಟಣಕ್ಕೆ ಮಾತ್ರ ಒದಗಿಸಲಾಗಿದ್ದು, 2ನೇ ಹಂತದಲ್ಲಿ ಮೀರಾಪುರಹಟ್ಟಿ, ಚಿಕ್ಕೋಡಿರೋಡ, ಜೋಡಟ್ಟಿ, ಕೆಂಚ್ಚನಟ್ಟಿ ಗ್ರಾಮಗಳಿಗೆ ವಿಸ್ತರಿಸಲಾಗುವುದು ಎಂದರು.

ಮುಖಂಡ ಶಿವಾನಂದ ಪಾಟೀಲ ಮಾತನಾಡಿ, ಜನರು ಫೈಪಲೈನ್ ಅಗೆಯುವಾಗ ತಕರಾರು ಮಾಡದೆ ಸಹಕರಿಸಬೇಕು ಎಂದು ತಿಳಿಸಿದರು. ಪಾಂಡುರಂಗ ರಂಗಸುಭೆ, ಪಪಂ ಮುಖ್ಯಾಧಿಕಾರಿ ಹಾಲಸಿದ್ದ ಸುಳ್ಳನ್ನವರ, ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಇಇ ಅಶೋಕ ಶಿರೂರ, ಗಣೇಶ ಮೋಹಿತೆ, ಮಂಜುನಾಥ ಘೇವಾರಿ, ಶಿವಾನಂದ ಮರ‌್ಯಾಯಿ, ಮಹಾದೇವ ಪ್ರಧಾನಿ, ಮಹಾದೇವ ಜಿವಣಿ, ಸುನೀಲ ಇನಾಮದಾರ, ಸಿದ್ರಾಮ ಹಿರೇಕುರಬರ, ನಾಗಪ್ಪ ಬಾಡದ, ರವಿ ಹಿರೇಕುರಬರ, ಬುತಪ್ಪ ಹಿರೇಕುರಬರ, ಶಂಕರಗೌಡ ಪಾಟೀಲ, ಲಕ್ಷ್ಮಣ ಮಂಗಿ, ಲಕ್ಷ್ಮಣ ಹನುಮನ್ನವರ, ಬಾಳು ಕುಕನೂರ, ಶ್ರೀಶೈಲ ತೇರದಾಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net