

ಹುಬ್ಬಳ್ಳಿ: ಸ್ವಾತಂತ್ರ್ಯೊಧರ ತ್ಯಾಗ, ಬಲಿದಾನಗಳನ್ನು ಸ್ಮರಿಸುತ್ತ ನಾವೆಲ್ಲರೂ ಕೂಡಿ ಅಭಿವೃದ್ಧಿ ರಾಷ್ಟ್ರ ನಿರ್ವಿುಸಲು ಕಂಕಣ ಬದ್ಧರಾಗುವ ಜತೆಗೆ ಭಾರತವನ್ನು ವಿಶ್ವದ ನಂ 1 ರಾಷ್ಟ್ರವನ್ನಾಗಿ ಮಾಡಲು ಒಗ್ಗಟ್ಟಾಗಿರಲು ಶ್ರಮಿಸಬೆಕೆಂದು ಎಂದು ಸ್ವರ್ಣಾ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿ.ಎಸ್.ವಿ.ಪ್ರಸಾದ ಹೇಳಿದರು.
ಇಲ್ಲಿಯ ಕುಸಗಲ್ ರಸ್ತೆಯ ಕೇಶ್ವಾಪುರದ ನವೀನ ಪಾರ್ಕ ನಿವಾಸಿಗಳ ಸಂಘದಿಂದ ಆಯೋಜಿಸಿದ್ದ ಸ್ವಾತಂತ್ರ್ಯೊತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ಇಂದು ವಿಶ್ವದಲ್ಲೇ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಅದಕ್ಕೆ ಒಬ್ಬ ವ್ಯಕ್ತಿ ಕಾರಣವಲ್ಲ. ಮುಂಬರುವ ದಿನಗಳಲ್ಲಿ ದೇಶಭಕ್ತಿ ಇಟ್ಟುಕೊಂಡು ನಮ್ಮ ಜೀವನ ನಡೆಸಿದರೆ ಅತೀ ಶೀಘ್ರದಲ್ಲೇ ಭಾರತ ದೇಶ ವಿಶ್ವಗುರು ಆಗಲು ಸಾಧ್ಯ ಎಂದರು.
ನವೀನ ಪಾರ್ಕ್ ಬಡಾವಣೆಯ ಅಭಿವೃದ್ಧಿಗೆ ನಾವೆಲ್ಲರೂ ಕೈ ಜೋಡಿಸೋಣ. ಈ ಹಬ್ಬದ ವಾತಾವರಣಕ್ಕೆ ಒಳ್ಳೆಯ ಮನಸ್ಸಿನಿಂದ ಬಂದಿರುವವರು ನಿಜವಾದ ದೇಶಭಕ್ತರು ಎಂದರು. ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯರು ಉಪಸ್ಥಿತರಿದ್ದರು.