

ಹುಬ್ಬಳ್ಳಿ: ಆಷಾಢಮಾಸ ನಿಮಿತ್ತ ಇಲ್ಲಿಯ ಅರವಿಂದ ನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಗ್ರಾಮ ಹಾಗೂ ನಗರ ದೇವತೆಗಳಿಗೆ, ಮುತ್ತೈದೆಯರಿಗೆ ಉಡಿತುಂಬುವ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಮಂಗಳವಾರ ಜರುಗಿತು.
ಬ್ರಾಹ್ಮೀಮುಹೂರ್ತದಲ್ಲಿ ದೇವಿಯರಿಗೆ ನವವಿಧ ಸ್ನಾನ, ಮಹಾಭಿಷೇಕ, ವಿಶೇಷ ಪುಷ್ಪಾಲಂಕಾರದೊಂದಿಗೆ ಉದಯಪೂಜೆ ಕೈಂಕರ್ಯ ನೆರವೇರಿಸಲಾಯಿತು. ನಗರ ದೇವತೆಗಳಿಗೆ ಎಣ್ಣೆ-ದೀಪ ಕೊಟ್ಟು ಉಡಿತುಂಬಿ ಬಂದ ನಂತರ ಮುತ್ತೈದೆಯರಿಗೆ ಉಡಿ ತುಂಬಿಸಿ ಅವರಿಂದ ಶ್ರೀ ದೇವಿಯವರಿಗೆ ಆರತಿ ಮಾಡಿಸಲಾಯಿತು.
ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮಗಳು ಜರುಗಿದವು.
ಲಲಿತಾ ವಿಜಯ ಸಂಕೇಶ್ವರ, ಜ್ಯೋತಿ ಪ್ರಲ್ಹಾದ ಜೋಶಿ, ಪಾಲಿಕೆಯ ಉಪಮಹಾಪೌರ ದುರ್ಗಮ್ಮ ಬಿಜವಾಡ, ಮಾಜಿ ಮಹಾಪೌರರಾದ ವೀಣಾ ಬರದ್ವಾಡ, ತೋಟಪ್ಪ ನಿಡಗುಂದಿ, ಅಶೋಕ ವಾಲ್ಮೀಕಿ, ಶಶಿಕಾಂತ ಬಿಜವಾಡ, ಸಂಜು ಬುಗಡಿ, ಅಕ್ಷತಾ ರೂಗಿ ಅತಿಥಿಗಳಾಗಿ ಆಗಮಿಸಿದ್ದರು. ಇವರೆಲ್ಲರಿಗೂ ಮಾತೋಶ್ರೀ ಅಮ್ಮನವರು ಆರ್ಶೀವಾದದ ಉಡುಗೊರೆ ನೀಡಿ ಸನ್ಮಾನಿಸಿದರು. ನಂತರ ಅನ್ನಸಂತರ್ಪಣೆ ಜರುಗಿತು.
ಪ್ರಮುಖರಾದ ವಾಗೇಶಗೌಡ ಪಾಟೀಲ, ವಿರೂಪಾಕ್ಷಿ ಚಲವಾದಿ, ವಿಠ್ಠಲ ಏಕಬೋಟೆ, ಪ್ರಕಾಶ ಅರಗಂಜಿ, ರಾಜು ತಾಂಬೆ, ವೆಂಕಟೇಶ ರತನ, ರಾಜೇಶ್ವರಿ ಬಗಲಿ, ಅನಿತಾ ಬಾಣದ, ಅನುಪಮಾ ಅಕ್ಕೂರ, ಸವಿತಾ ಮಾಸಣಗಿ, ಶಾರದಾ ಪಾನಘಂಟಿ, ಅಕ್ಷತಾ ಜಾಧವ, ಶಾಂತಾ ಗಡಾದ, ಶೈಲಜಾ ಹಳ್ಳಿಕೇರಿ, ರೇಣುಕಾ ಕಂಬಾರ, ದಾಕ್ಷಾಯಿಣಿ ಕಂಬಾರ, ಆಶಾ ರಜಪೂತ, ಲತಾ ಹಳ್ಳಿಕೇರಿ, ಶಾಂತಾ ಮನಿದವರ, ಲೀಲಾವತಿ ಪೋಸಾ, ನಾಗರತ್ನ ಹೆಬ್ಬಳ್ಳಿ, ರೇಖಾ ಸುಳ್ಳದ, ಶೋಭಾ ತಾಂಬೆ, ಪುಷ್ಪಾ ಏಕಬೋಟೆ, ಪದ್ಮಾ ದಿವಟೆ, ಪರಶುರಾಮ ಸುಳ್ಳದ, ಶಂಕರ ಕಾಟವೆ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಇತರರು ಉಪಸ್ಥಿತರಿದ್ದರು. ಗುರು ಬನ್ನಿಕೊಪ್ಪ ನಿರೂಪಿಸಿ, ವಂದಿಸಿದರು.