ಧರ್ಮ ಉಳಿಸಲು, ಅಳಿಸಲು ಅಸಾಧ್ಯ :ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಟ್ರಸ್ಟಿ ಪ್ರಶಾಂತ್ ಕಾಜವ ಅನಿಸಿಕೆ

New Project (6)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಹಿಂದು ಶ್ರೇಷ್ಠ ಧರ್ಮ. ನಾವು ಈ ಭೂಮಿಯಲ್ಲಿ ಒಂದಷ್ಟು ದಿನ ಇದ್ದು ಹೋಗುವವರು. ಆದರೆ ಹಿಂದು ಧರ್ಮ ಸನಾತನ. ಹೀಗಿರುವಾಗ ಸನಾತನ ಧರ್ಮವನ್ನು ಉಳಿಸಲು ನಾವು ತೃಣ ಸಮಾನ. ಧರ್ಮ ಉಳಿಸಲು ಅಥವಾ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಟ್ರಸ್ಟಿ ಪ್ರಶಾಂತ್ ಕಾಜವ ಹೇಳಿದರು. ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಭಜನಾ ಮಂಡಳಿ, ಪರಂಜ್ಯೋತಿ ವಾತೃ ಮಂಡಳಿ ಹಾಗೂ ಸಂಧ್ಯಾ ಭಜನೋತ್ಸವ ಸಮಿತಿ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ಮಂದಿರದ ತತ್ವಮಸಿ ಮಂಟಪದಲ್ಲಿ ನಡೆಯುತ್ತಿರುವ ಸಂಧ್ಯಾ ಭಜನೆಯ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು. ಅಜ್ಜರಕಾಡು ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ.ನವೀನ್ ಕೊಣಾಜೆ ವಾತನಾಡಿ, ಭಜನೆ ಭಗವಂತನಿಗೆ ಮನಃಪೂರ್ವಕ ಸಲ್ಲಿಸುವ ಪ್ರಕ್ರಿಯೆ. ಕಲಿಯುಗದಲ್ಲಿ ಭಜನೆಯ ಮೂಲಕ ಮೋಕ್ಷ, ಸಾಯುಜ್ಯ ಕಾಣಬೇಕು. ದುಡ್ಡಿನ ಹಿಂದೆ ಓಡುವವರಿಗೆ ನೆಮ್ಮದಿ ಇಲ್ಲ. ಆದರೆ ಭಜನೆಯ ಹಿಂದೆ ಓಡುವವರಿಗೆ ನೆಮ್ಮದಿ ಇದ್ದೇ ಇದೆ ಎಂದರು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಟ್ರಸ್ಟಿ ಪ್ರಶಾಂತ್ ಕಾಜವ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟಿ ಚಂದ್ರಶೇಖರ ಶೆಟ್ಟಿ ಮಂಟಮೆ, ಅಸೈಗೋಳಿ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ದಯಾನಂದ, ಸಂಧ್ಯಾ ಭಜನಾ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್ ಮೊದಲಾದವರಿದ್ದರು. ಆನಂದ ಕೆ.ಅಸೈಗೋಳಿ ಸ್ವಾಗತಿಸಿದರು. ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಸ್ತಾವಿಸಿದರು. ತ್ಯಾಗಂ ಹರೇಕಳ ನಿರೂಪಿಸಿದರು. ರಾಮಕೃಷ್ಣ ಪಟ್ಟೋರಿ ಕಕ್ಕೆಮಜಲು ವಂದಿಸಿದರು.

ದೇವಸ್ಥಾನಕ್ಕೆ ಬರುವಾಗ ಚಪ್ಪಲಿ ಗೇಟಿನ ಹೊರಗಿಟ್ಟು ಬರುವಂತೆ ರಾಜಕೀಯ ಸಹಿತ ಇತರ ಇರಾದೆಗಳನ್ನು ಹೊರಗಿಟ್ಟು ಬರಬೇಕು. ಶಿಕ್ಷಕರು ಎಂದಿಗೂ ರಾಜಕೀಯ ವ್ಯಕ್ತಿಗಳಾಗಬಾರದು. ಹೆತ್ತವರು ಮಕ್ಕಳನ್ನು ರಾಜಕೀಯ ಪಕ್ಷ, ಸಂಟನೆಗಳ ಕೈಗೆ ಕೊಡಬೇಡಿ. ಅವರಿಗೆ ಶಿಕ್ಷಣ ನೀಡಿ, 25 ವರ್ಷವಾದ ಬಳಿಕ ಅವರಿಗೆ ಬೇಕಾದುದನ್ನು ಅವರೇ ಆಯ್ಕೆ ವಾಡಿಕೊಳ್ಳಲಿ. ಪ್ರಶಾಂತ್ ಕಾಜವ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಟ್ರಸ್ಟಿ https://www.vijayavani.net/health-checkup-treatment-camp-at-sarada-college https://www.vijayavani.net/vijayavani-vidyarthi-udyog-mitra-supplementary-distribution-programme

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net