ಇಂದಿಗೂ ಕೈಗೂಡದ ರೈತರ ಬೇಡಿಕೆ

31 sandoor 5
ಸಂಡೂರು ತಾಲೂಕಿನ ಬೊಮ್ಮಘಟ್ಟದಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರವನ್ನು ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹುಚ್ಚವ್ವನಳ್ಳಿ ಮಂಜುನಾಥ ಉದ್ಘಾಟಿಸಿದರು. ರಾಜ್ಯ ಪ್ರ.ಕಾರ್ಯದರ್ಶಿ ದೇವರಮನೆ ಮಹೇಶ, ರಾಜ್ಯ ಉಪಾಧ್ಯಕ್ಷ ಕಲ್ಲಾಳು ಪರುಶುರಾಮಪ್ಪ, ಜಿಲ್ಲಾಧ್ಯಕ್ಷ ಕೆ.ದೇವೇಂದ್ರಪ್ಪ, ಹೋರಾಟಗಾರ ಎಚ್.ಎಂ.ಪಂಡಿತಾರಾದ್ಯ ಇದ್ದರು.
Published on

ಸಂಡೂರು: ರಾಮಕೃಷ್ಣಹೆಗಡೆ, ಜಾರ್ಜ್ ಫರ್ನಾಂಡೀಸ್, ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್, ದೇವೇಗೌಡರು ಸೇರಿ ಅನೇಕರು 5 ದಶಕಗಳ ಹಿಂದೆ ರೈತ ಚಳವಳಿ ಹುಟ್ಟು ಹಾಕಿದ್ದಾರೆ ಎಂದು ರೈತ ಹೋರಾಟಗಾರ ಎಚ್.ಎಂ.ಪಂಡಿತಾರಾಧ್ಯ ಹೇಳಿದರು.

ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಬೊಮ್ಮಘಟ್ಟದಲ್ಲಿ ಹಮ್ಮಿಕೊಂಡಿದ್ದ ರೈತ ತರಬೇತಿಯಲ್ಲಿ ಗುರುವಾರ ಮಾತನಾಡಿದರು.

ರೈತರ ಹೋರಾಟದ ಮೂಲಕ ಆರಂಭವಾದ ಬೇಡಿಕೆಗಳು ಇಂದಿಗೂ ಅರಣ್ಯ ಹಕ್ಕು ಕಾಯ್ದೆ, ಎ.ಖರಾಬು, ಬಿ ಖರಾಬು ಹೆಸರಲ್ಲಿ ಜೀವಂತವಾಗಿವೆ ಎಂದರು.

ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಎಲ್ಲ ರೈತರ ಹಾಗೂ ರೈತ ಮಹಿಳೆಯರನ್ನು ಸಂಘಟನೆ ಮಾಡಬೇಕು ನಂತರ ಹೋರಾಟ ಮಾಡಬೇಕು. ಮೊದಲು ರೈತರು ಶಿಸ್ತು ಬದ್ಧವಾಗಿರಬೇಕು.

ಎಲ್ಲ ಗ್ರಾಮಘಟಕಗಳ ರಚನೆ ಮಾಡುವ ಮೂಲಕ ರೈತ ಹೋರಾಟಕ್ಕೆ ಚಾಲನೆ ನೀಡಬೇಕು. ರೈತರು ಹಿಂದೇಟು ಹಾಕದೆ ಹೆಗಲು ಕೊಟ್ಟು ಹೋರಾಟ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇನಾಂ ಭೂಮಿಗಳಲ್ಲಿ ರೈತರ ಹೆಸರು ತೆಗೆದುಹಾಕಿದ್ದಾರೆ. ಅಕ್ರಮ ಸಕ್ರಮದಡಿ ಸಲ್ಲಿಕೆಯಾಗಿದ್ದ, ಅರಣ್ಯ ಹಕ್ಕು ಕಾಯ್ದೆಯಡಿ ರೈತರ 11ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಬೇಡಿಕೆ ಈಡೇರದಿದ್ದಲ್ಲಿ ಸಂಡೂರಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಎಂದರು.

ರಾಜ್ಯ ಸಹ ಕಾರ್ಯದರ್ಶಿ ವಿ.ಎಸ್.ಶಂಕರ್, ವಿಜಯನಗರ ಜಿಲ್ಲಾಧ್ಯಕ್ಷ ಕೆ.ಬಸವರಾಜ ಬಣಕಾರ್, ಪರಿಸರ ಮರುಸ್ಥಾಪನೆ ಸಮಿತಿ ತಾಲೂಕು ಅಧ್ಯಕ್ಷ ಹೊನ್ನೂರ ಸ್ವಾಮಿ, ಸಂಡೂರು ತಾಲೂಕು ಅಧ್ಯಕ್ಷ ಜೆ.ಶಾಂತಕುಮಾರ್, ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಓಬಳೇಶ, ಜಿಲ್ಲಾ ಉಪಾಧ್ಯಕ್ಷ ಡಿ.ಬಸವರಾಜ, ಗೌರವ ಅಧ್ಯಕ್ಷ ಸಂಡೂರು ದೊಡ್ಡ ಮಲ್ಲಯ್ಯ, ಪ್ರ.ಕಾರ್ಯದರ್ಶಿ ಸಂಡೂರು ಎನ್.ಓಂಕಾರಪ್ಪ, ಉಪಾಧ್ಯಕ್ಷ ಸಂಡೂರು ಶರಣಯ್ಯ, ಅಗ್ರಹಾರ ಯರ‌್ರಿಸ್ವಾಮಿ, ಕಾರ್ಯಾಧ್ಯಕ್ಷ ಸಂಡೂರು ಮಹಮ್ಮದ್ ರಫಿ, ಕೂಡ್ಲಿಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಹುಲಿಕುಂಟೆಪ್ಪ, ಮುಖಂಡರಾದ ಗಂಡಿ ಮಾರೆಪ್ಪ, ಅಡಿವೆಪ್ಪ, ವಸಂತ ಕುಮಾರ್, ಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net