ಜಂಗಮ ಬಡವನಾದರೂ ಸಮಾಜದಲ್ಲಿ ಉನ್ನತ ಸ್ಥಾನ

Even though the movable is poor, it holds a high position in society.
Even though the movable is poor, it holds a high position in society.
Published on

ಗುಳೇದಗುಡ್ಡ ಜಂಗಮರು ಬಡತನದಲ್ಲಿದ್ದರು ಸಮಾಜದಲ್ಲಿ ಅವರಿಗೆ ಅತ್ಯುನ್ನತ ಸ್ಥಾನವಿದೆ. ಆ ಸ್ಥಾನಕ್ಕೆ ತಕ್ಕಂತೆ ನಾವು ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಕಾಪಾಡಿಕೊಂಡು ಬೆಳೆಸಿಕೊಂಡು ಬರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ಮುರುಘಾಮಠದ ಕುಮಾರೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಗುಳೇದಗುಡ್ಡ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ರೇಣುಕಾಚಾರ್ಯರು, ಬಸವೇಶ್ವರರು ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ತಾಲೂಕುಮಟ್ಟದ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಉಳಿಸಿಕೊಂಡರೆ ಮಾತ್ರ ನಮ್ಮ ಸಮಾಜ, ನಮ್ಮ ಧರ್ಮವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ವೀರಶೈವ ಎಲ್ಲ ಒಳಪಂಗಡಗಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಜಂಗಮರ ಮೇಲಿದೆ. ಶ್ರೇಷ್ಠ ಸಮಾಜದಲ್ಲಿ ಹುಟ್ಟಿದ ನಾವು ನಮ್ಮ ತನವ ಕಾಯ್ದುಕೊಳ್ಳಬೇಕು ಎಂದರು.

ಬಾಜಪಾ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿ, ಮಠಾಧೀಶರು ಸಮಾಜಗಳ ಅಭಿವೃದ್ಧಿಗಾಗಿ ತಮ್ಮ ತಂದೆ, ತಾಯಿ, ಸಂಬಂಧಿಕರನ್ನು ತೊರೆದು ಇಡೀ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟಿದ್ದಾರೆ. ಅವರ ತ್ಯಾಗವನ್ನು ನಾವು ಸ್ಮರಿಸೋಣ ಎಂದರು.

ಸಾನ್ನಿಧ್ಯವಹಿಸಿದ್ದ ಮರುಘಾಮಠದ ಕಾಶಿನಾಥ ಮಹಾಸ್ವಾಮಿಗಳು ಮಾತನಾಡಿ, ಜಂಗಮ ಸಮಾಜ ಎಲ್ಲರನ್ನು ಅಪ್ಪಿಕೊಂಡು ಬದುಕುತ್ತದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಹಣುಮಂತ ಮಾವಿನಮರದ ಮಾತನಾಡಿದರು. ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನ ಶಿಕ್ಷಕ ಸಂಗಯ್ಯ ಗಣಾಚಾರಿ ಉಪನ್ಯಾಸ ನೀಡಿದರು. ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಿವಾನಂದ ಮಳಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಸವರಾಜ ಸಿಂದಗಿಮಠ, ವೈಷ್ಣವಿ ಗೂಳಿ, ಭೀಮಸಿಂಗ್ ರಾಠೋಡ ಬಸವರಾಜ ದಿಂಡಿ, ಬಸವರಾಜ ಜಿಡಗಿ ಅವರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಉಪಾಧ್ಯಕ್ಷ ಮಹಾಂತೇಶ ಸರಗಣಾಚಾರಿ, ಬಂಡಯ್ಯ ಹಿರೇಮಠ, ಮುಪ್ಪಯ್ಯ ಘಂಟಿಮಠ, ಪಡದಯ್ಯ ಕಕ್ಕಯ್ಯನಮಠ, ಚನಬಸಯ್ಯ ಸಿಂದಗಿಮಠ, ಪ್ರಭು ತಟ್ಟಿಮಠ, ಜಗದೀಶ ಕಾರುಡಗಿಮಠ, ಜಗದೀಶ ಸರಗಣಾಚಾರಿ, ಉಮಾಶಂಕರ ಶಿವನಗೌಡರ, ಸಂಗಯ್ಯ ಗವಿಮಠ ಶಿವಕುಮಾರ ಸಾವಳಗಿಮಠ, ಈರಯ್ಯ ಚನ್ನಸಂಗಯ್ಯನಮಠ, ಶ್ರೀಕಾಂತ ಸರಗಣಾಚಾರಿ, ಸಿದ್ದು ಸಂಕಿನಮಠ, ಶಿವಯ್ಯ ಕಕ್ಕಯ್ಯನಮಠ, ನಿಂಗಯ್ಯ ಪೂಜಾರಿ, ಸಂಗಯ್ಯ ಶಿವಪ್ಪಯ್ಯನಮಠ, ಸಂಗಯ್ಯ ಹಿರೇಮಠ, ವಿಶ್ವನಾಥ ಹಿರೇಮಠ, ಅಕ್ಕಮ್ಮ ಶಿವಪ್ಪಯ್ಯನಮಠ, ಗೀತಾ ಸಾರಂಗಮಠ, ದ್ರಾಕ್ಷಾಯಿಣಿ ಸಿಂದಗಿಮಠ, ಗಿರಿಜಾ ಕಿರಸೂರಮಠ, ನೀಲವ್ವ ಚನ್ನಸಂಗಯ್ಯನಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net