ಮಾನವನಾಗಿದ್ದರೂ ಪರಬ್ರಹ್ಮ ಸ್ವರೂಪಿ ಶ್ರೀಕೃಷ್ಣ

byn (2)
Published on

ಬೈಂದೂರು: ಕೃಷ್ಣ ಪರವಾತ್ಮನ ಮಹಿಮೆಯನ್ನು ಪದಗಳಲ್ಲಿ ತುಂಬಲು ಸಾಧ್ಯವಿಲ್ಲ. ಶ್ರೀಕೃಷ್ಣ ನಮ್ಮ ನಡುವೆ ವಾನವನಾಗಿ ಬದುಕಿದ್ದರೂ ಅವನು ಪುರಬ್ರಹ್ಮ ಸ್ವರೂಪನಾಗಿರುವುದರಿಂದ ಯಾರೂ ಅವನನ್ನು ಗ್ರಹಿಸಲು ಸಾಧ್ಯವಿಲ್ಲ ಎಂದು ಮಸ್ಕಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಅರ್ಚಕ ನಾವುಂದ ರಾವೇಂದ್ರ ಕಾರಂತ್ ಹೇಳಿದರು.

ನಾವುಂದ ಮಸ್ಕಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವರಿಗೆ ವಿಶೇಷ ಅಲಂಕಾರ, ಪೂಜೆ, ಮಂಗಳಾರತಿ ಸೇವೆ, ಮಹಾ ಪೂಜೆ, ಭಕ್ತರಿಂದ ಭಜನೆ, ಬಾಲಕೃಷ್ಣ, ಮುದ್ದುಕೃಷ್ಣ ವೇಷ ಸ್ಪರ್ಧೆ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಿತು.

ದೇವಳ ಆಡಳಿತ ಮಂಡಳಿ ಅಧ್ಯಕ್ಷ ಬಾಬು ಶೆಟ್ಟಿ, ಮಸ್ಕಿ ಸತೀಶ್ ಭಟ್, ಸುರೇಶ ಖಾರ್ವಿ, ರು ಪೂಜಾರಿ, ಚಂದ್ರ ಪೂಜಾರಿ, ಬಾಬು ಪೂಜಾರಿ, ಗೌರಿ ಪೂಜಾರಿ, ಗಿರಿಜಾ ಮೊಗವೀರ, ಗ್ರಾಪಂ ಸದಸ್ಯ ರಾಮ ಎಸ್.ಖಾರ್ವಿ, ಗಣೇಶ ಪೂಜಾರಿ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net