ಅಂತು ಇಂತೂ ಕೆರೆಗೆ ನೀರು ಬಂತು !

25 tdl-1 hangandi
ತೇರದಾಳ ತಾಲೂಕಿನ ಹನಗಂಡಿ ಗ್ರಾಮದ ಕೆರೆ ನೀರನ್ನು ತುಂಬಲಾಯಿತು. ಮುಖಂಡ ಪ್ರಸನ್ನಕುಮಾರ ದೇಸಾಯಿ, ಅಲ್ಲಾಭಕ್ಷ ಅಲಾಸ್, ಗ್ರಾಪಂ ಸದಸ್ಯ ಧರೇಶ ಹುದ್ದಾರ ಇತರರಿದ್ದಾರೆ.
Published on

ತೇರದಾಳ: ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ತಾಲೂಕಿನ ಹನಗಂಡಿ ಗ್ರಾಮದ ಕೆರೆಗೆ ಕಾಲುವೆ ನೀರು ಹರಿಸಿ ಗ್ರಾಮಸ್ಥರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಕಾಲುವೆಯಿಂದ ಅಂದಾಜು 9 ಕಿ.ಮೀ. ಅಂತರದಲ್ಲಿರುವ ಕರೆಗೆ ರೈತರ ಸಹಕಾರದೊಂದಿಗೆ ನೀರು ತುಂಬಿಸಿದರು. ಈ ಮೊದಲು ಕೆರೆಯಲ್ಲಿ ನೀರಿಲ್ಲದೆ ಬಣಗುಡುತ್ತಿತ್ತು. ಸದರಿ ಕೆರೆಯು ಗ್ರಾಮದ ನೂರಾರು ದನಕರುಗಳು, ಕುರಿಗಳಿಗೆ ಕುಡಿಯುವ ನೀರು ಹಾಗೂ ಜನರಿಗೆ ಆಸೆರೆಯಾಗಿತ್ತು. ಕೆರೆ ಖಾಲಿ ಆಗಿದ್ದರಿಂದಾಗಿ ಜನ- ಜಾನುವಾರುಗಳಿಗೆ ತೀವ್ರ ತೊಂದರೆ ಆಗಿತ್ತು. ಈ ಕುರಿತು ಜು. 21 ರಂದು ‘ಭಣಗುಡುತ್ತಿರುವ ಹನಗಂಡಿ ಕೆರೆ’ ತಲೆಬರಹದಡಿ ಸುದ್ದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತಕೊಂಡ ಅಧಿಕಾರಿಗಳು ಹಾಗೂ ಮುಖಂಡರು ಕೆರೆ ತಂಬಲು ಕ್ರಮ ಕೈಗೊಂಡಿದ್ದಾರೆ.

ಶಾಶ್ವತ ಮೂಲದ ಯೋಜನೆ:
ಕೆರೆಗೆ ಕಾಲುವೆ ನೀರು ತರಲು ಪ್ರತಿಸಾರಿ ಸಾಕಷ್ಟು ಪ್ರಯತ್ನಿಸಬೇಕಿದೆ. ಆದ್ದರಿಂದ ಕೆರೆಗೆ ಕೃಷ್ಣಾ ನದಿ ನೀರನ್ನು ಪೈಪ್‌ಲೈನ್ ಮೂಲಕ ಹರಿಸುವ ಶಾಶ್ವತ ಯೋಜನೆ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net