

ಬೈಲಹೊಂಗಲ: ಜಗವೆಲ್ಲ ನಿದ್ರೆಯಲ್ಲಿರುವಾಗ ಮಳೆ, ಗಾಳಿ, ಚಳಿ ಲೆಕ್ಕಿಸದೆ ಸುದ್ದಿ ಹೊತ್ತು ತರುವ ಪತ್ರಿಕೆಯನ್ನು ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ನಿರತರಾಗಿರುವ ವಿತರಕರ ಸೇವೆ ಅನನ್ಯ.ತಾಲೂಕಿನ ನೇಗಿನಹಾಳ ಗ್ರಾಮದ ಸದೆಪ್ಪ ಕೀರಪ್ಪ ಗರಗದ ಅವರು ಸತತ 45 ವರ್ಷಗಳಿಂದ ಪತ್ರಿಕಾ ವಿತರಣೆ ಮಾಡುತ್ತಿದ್ದು, ಇಳಿವಯಸ್ಸಿನಲ್ಲೂ ಅವರ ಸೇವೆ ಗಮನಸೆಳೆಯುತ್ತದೆ.
85 ವಯಸ್ಸಿನ ಸದೆಪ್ಪ ಇಂದಿಗೂ ಮನೆ-ಮನೆಗೆ ಪತ್ರಿಕೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿರುವುದು ಮಾದರಿಯಾಗಿದೆ. ಕೋವಿಡ್, ಪ್ರವಾಹದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪತ್ರಿಕೆ ವಿತರಿಸಿ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಸದ್ಯ ಅವರ ಪುತ್ರ ಮಲ್ಲಿಕಾರ್ಜುನ ತಂದೆಗೆ ಕೈಜೋಡಿಸುತ್ತಿದ್ದಾರೆ.
ಸದೆಪ್ಪ ವಿಜಯವಾಣಿ ಪತ್ರಿಕೆ ಸರಬರಾಜು ಮಾಡುತ್ತಿದ್ದು, ಪತ್ರಿಕೆ ಹಂಚಿಕೆ ನಂತರ ತನ್ನ ಎರಡು ಎಕರೆ ಜಮೀನಿಗೆ ತೆರಳಿ ಕೃಷಿ ಕಾರ್ಯ ಮಾಡುತ್ತಾರೆ. ‘ಮೊಬೈಲ್ ಗೀಳಿನ ನಡುವೆಯೂ ಪತ್ರಿಕೆಯ ವೌಲ್ಯ ಕಡಿಮೆಯಾಗಿಲ್ಲ. ಸೈಕಲ್ ಮೇಲೆ ತೆರಳಿ ಪತ್ರಿಕೆ ಮುಟ್ಟಿಸಿದಾಗ ಜನರ ಮುಖದಲ್ಲಿ ಮೂಡುವ ಮುಗುಳ್ನಗೆ ನಮ್ಮ ಸೇವೆ ಸಾರ್ಥಕಪಡಿಸುತ್ತದೆ. ದುಡಿಯುವ ಕೆಗಳಿಗೆ ಏನೇ ಕೆಲಸವಾದರೂ ಸುಲಭವಾಗುತ್ತದೆ. ದುಡಿದು ತಿನ್ನುವ ಮನೋಭಾವ ಇರಬೇಕು ಎಂದು ಯುವಕರಿಗೆ ಕಿವಿ ಮಾತು ಹೇಳುತ್ತಾರೆ ಸದೆಪ್ಪ. ಗಣೇಶ-ಗೀತಾ ದಂಪತಿ ಸೇವೆ ಅನನ್ಯ ರಾಮದುರ್ಗ ಪಟ್ಟಣದ ನಿವಾಸಿ ಗಣೇಶ ವೆಂಕಟೇಶ ಮುನವಳ್ಳಿ 45 ವರ್ಷದಿಂದ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಮಕ್ಕಳಿಲ್ಲದ ಗಣೇಶ ಹಾಗೂ ಗೀತಾ ದಂಪತಿ ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಪತ್ರಿಕೆ ವಿತರಣೆ ಕೈಬಿಟ್ಟಿಲ್ಲ. ವಿಜಯವಾಣಿ ಸೇರಿ ಹಲವು ಪತ್ರಿಕೆ, ಮಾಸ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಗಣೇಶ ಇಳಿವಯಸ್ಸಲ್ಲೂ ಪತ್ರಿಕೆಗಳ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ.
ದಿನನಿತ್ಯ ಸುಮಾರು 100 ಮನೆಗಳಿಗೆ ಹೋಗಿ ಪತ್ರಿಕೆ ಹಂಚುವ ಜತೆಗೆ ಪಟ್ಟಣದ ಬಸ್ ನಿಲ್ದಾಣದಲ್ಲೂ ಪತ್ರಿಕೆಗಳನ್ನು ಹಂಚುತ್ತಾರೆ. ಗಣೇಶ ಅವರಿಗೆ ಅನಾರೋಗ್ಯ ಅಥವಾ ಇನ್ನಾವುದೇ ಸಮಸ್ಯೆಯಿಂದ ಪತ್ರಿಕೆ ವಿತರಣೆ ಸಾಧ್ಯವಾಗದಿದ್ದರೆ ಪತ್ನಿ ಗೀತಾ ಅವರೇ ಪತ್ರಿಕೆ ವಿತರಿಸುತ್ತಾರೆ. ಬದುಕಿನ ಸಂಧ್ಯಾಕಾಲದಲ್ಲೂ ಪತ್ರಿಕೆಗಳ ಮೇಲೆ ದಂಪತಿಗಿರುವ ಪ್ರೀತಿ ಕಂಡು ರಾಮದುರ್ಗದ ಜನರು ವಿಶೇಷ ಗೌರವ ತೋರುತ್ತಾರೆ.
ನಾನು ಚಿಕ್ಕಂದಿನಿಂದಲೂ ಸದೆಪ್ಪ ಅವರ ಪತ್ರಿಕಾ ಸೇವೆಯನ್ನು ಹತ್ತಿರದಿಂದ ಕಂಡಿದ್ದೇನೆ. ಪೇಪರ್ ಅಜ್ಜ ಎಂದೇ ೇಮಸ್ಸಾಗಿರುವ ಸದೆಪ್ಪಜ್ಜ ಯುವ ಪತ್ರಕರ್ತರಿಗೆ ಮಾದರಿ.| ಬಾಬಾಸಾಹೇಬ ಪಾಟೀಲ ಕಿತ್ತೂರು ಶಾಸಕ
| ಬಸವರಾಜ ಕಲಾದಗಿ ಬೈಲಹೊಂಗಲ