

ಗೋಕಾಕ: ಕನ್ನಡ ನೆಲದ ಸಂಸತಿ, ಸಂಸ್ಕಾರ ಎಲ್ಲರೂ ಪಾಲನೆ ಮಾಡಿ ಮಕ್ಕಳಲ್ಲಿಯೂ ಕನ್ನಡಾಭಿಮಾನ ಮೂಡಿಸಬೇಕು ಎಂದು ತಹಸೀಲ್ದಾರ್ ಡಾ.ಮೋಹನ್ ಭಸ್ಮೆ ಹೇಳಿದರು.
ನಗರದ ಬಸವ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಟಕ ಮತ್ತು ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಾಂಸತಿಕ ವೇದಿಕೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಕಲೆ, ಸಾಹಿತ್ಯ, ಸಂಸತಿಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕು. ಸಾಹಿತಿ ಕಲಾವಿದರನ್ನು ಗೌರವಿಸಬೇಕು. ಮಾತಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ಕನ್ನಡ ಪರಂಪರೆ ಉಳಿಸಲು ಎಂದು ಕರೆ ನೀಡಿದರು.
ಡಾ.ರಾಜಶೇಖರ ಬಿರಾದಾರ, ಭಾಗ್ಯ ಗುರವ ಉಪನ್ಯಾಸ ನೀಡಿದರು. ಸಾಧಕರಾದ ಸುರೇಶ ಮುದ್ದಾರ, ಛಾಯಾಗ್ರಾಹಕ ಬಿ.ಪ್ರಭಾಕರ ಅವರನ್ನು ಸನ್ಮಾನಿಸಲಾಯಿತು. ಟಕದ ಅಧ್ಯೆ ಭಾರತಿ ಮದಬಾವಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಜಿಲ್ಲಾಧ್ಯ ಮೋಹನ ಪಾಟೀಲ, ತಾಲೂಕು ಮಾಜಿ ಅಧ್ಯ ಮಹಾಂತೇಶ ತಾವಂಶಿ, ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ, ಭಾವಯಾನ ವೇದಿಕೆಯ ವಸುಂಧರಾ ಕಾಳೆ, ಬಸವ ಮಂಟಪದ ರಾಜೇಶ ಉಳ್ಳಾಗಡ್ಡಿ ಇತರರಿದ್ದರು.