

ಇಂಡಿ: ಭಕ್ತರು ಕೇಳಿದ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ನೀಡಲಾಗಿದ್ದು, ಡಿ.9 ರಿಂದ 11 ರವರೆಗೆ ನಡೆಯುವ ಧಾನಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರು ಅನುಮತಿ ನೀಡಿದ್ದಾರೆ ಎಂದು ದೇವಸ್ಥಾನ ಕಮಿಟಿ ಅಧ್ಯ ಕಾಸುಗೌಡ ಬಿರಾದಾರ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೆಕ್ಕಪತ್ರ ನೀಡಿದರೂ ಕೆಲವರು ದುರುದ್ದೇಶದಿಂದ ದೇವಸ್ಥಾನದ ಎದುರು ಧರಣಿ ನಡೆಸುತ್ತಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿಯೇ ಲೆಕ್ಕಪತ್ರ ನೀಡಲಾಗಿದೆ. ಅಲ್ಲದೆ, ದೇವಸ್ಥಾನದ ಸೂಚನಾ ಲಕದಲ್ಲಿಯೂ ಲೆಕ್ಕಪತ್ರದ ಮಾಹಿತಿ ನೀಡಿದ್ದೇವೆ ಎಂದು ಸಷ್ಟಪಡಿಸಿದರು.
ನ.26 ರಿಂದ ಡಿ. 9ರ ವರೆಗೆ ಧಾನಮ್ಮದೇವಿ ಪುರಾಣ ಕಾರ್ಯಕ್ರಮ ಸಂಜೆ 7 ರಿಂದ 8 ಗಂಟೆ ರವರೆಗೆ, ಡಿ.9ಕ್ಕೆ ಸಾಮೂಹಿಕ ವಿವಾಹ, ಧರ್ಮಸಭೆ, ಡಿ.10 ಮತ್ತು 11 ರಂದು ಜಾತ್ರಾ ಮಹೋತ್ಸವ ನಡೆಯಲಿದೆ.
ಶ್ರೀಕಾಂತ ಕೂಡಿಗನೂರ, ದೇವೇಂದ್ರ ಕುಂಬಾರ, ಬಸವರಾಜ ಮಸಳಿ, ವಿಜಯ್ ಉಡಚಣ, ರಾವುತ್ ಲಾಳಸಂಗಿ, ಸತೀಶ ಝಂಪಾ, ಅಶೋಕಗೌಡ ಪಾಟೀಲ ಮತ್ತಿತರರಿದ್ದರು.