ಶ್ರೀ ಶಂಕರಾಚಾರ್ಯರ ಗ್ರಂಥ ಜೀರ್ಣಿಸಿಕೊಳ್ಳಲು 320 ವರ್ಷಗಳು ಸಹ ಸಾಲದು

book
Published on

ಮೈಸೂರು: ಆದಿ ಗುರು ಶ್ರೀ ಶಂಕರಾಚಾರ್ಯರು ಧರ್ಮ ಗ್ರಂಥಗಳ ರಚನೆಯಲ್ಲಿ ನಿರತರಾಗದೆ ಕಾವ್ಯ ರಚನೆಯಲ್ಲಿ ತೊಡಗಿದ್ದರೆ ಕವಿ ಕಾಳಿದಾಸ ಅವರನ್ನು ಮೀರಿಸುತ್ತಿದ್ದರು ಎಂದು ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ ನಾಗರಾಜರಾವ್ ಹೇಳಿದರು.

ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾನುವಾರ ಆಯೋಜಿದ್ದ ಕಾರ್ಯಕ್ರಮದಲ್ಲಿ ಸುಮಾಶೇಷಾಚಲನ್ ರಚನೆಯ ಸೌಂದರ್ಯಲಹರೀ ಹಾಗೂ ಮಂಥನ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಶಂಕರಾಚಾರ್ಯರು 8 ವರ್ಷದಲ್ಲೇ ನಾಲ್ಕು ವೇದಗಳನ್ನು ಕಲಿತರು. ಕೇವಲ 16ನೇ ವಯಸ್ಸಿಗೆ ವಾರಾಣಿಸಿಯಲ್ಲಿ ವೇದ ಗ್ರಂಥ, ಉಪನಿಷತ್ತುಗಳನ್ನು ಪಾರಾಂಗತ ಮಾಡಿಕೊಂಡಿ ದ್ದರು. ಅವರು ಬದುಕಿದ್ದು 32 ವರ್ಷ ಮಾತ್ರ. ಆದರೆ, ಅವರು ರಚಿಸಿದ ಗ್ರಂಥಗಳನ್ನು ಅಧ್ಯಯನ ಮಾಡಿ ಜೀರ್ಣಿಸಿ ಕೊಳ್ಳಲು 320 ವರ್ಷಗಳು ಸಹ ಸಾಲದು. ಅಷ್ಟೊಂದು ವಿದ್ವತ್‌ಪೂರ್ಣವಾಗಿದೆ ಅವರ ಗ್ರಂಥಗಳು ಎಂದರು.

ಈ ಸಂದರ್ಭ ಮುಲಕನಾಡು ಸಭಾ ಅಧ್ಯಕ್ಷ ಕೆ.ಎನ್. ಗುರುಮೂರ್ತಿ, ಜೆಸಿಇ ಇಂಜಿನಿಯರಿಂಗ್ ಕಾಲೇಜು ನಿವೃತ್ತ ಪ್ರಾಧ್ಯಾಪಕ ಸಿ.ಆರ್. ನಟರಾಜ್, ನಿವೃತ್ತ ಪ್ರಾಧ್ಯಾಪಕಿ ಡಾ.ಕೆ.ಎಲ್. ಪ್ರಸನ್ನಾಕ್ಷಿ, ಲೇಖಕಿ ಸುಮಾಶೇಷಾಚಲನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net