ಮನೆ, ವ್ಯಾಪಾರ ಮಳಿಗೆ ತೆರವು- ಆದೇಶ ಉಲ್ಲಂಘನೆ ಆರೋಪ

MAHEMNDR KUMAR
MAHEMNDR KUMAR
Published on

ರಾಯಚೂರು ನಗರದ ಹಾಷ್ಮೀಯಾ ಮಸೀದಿಯ ಸ್ಥಳದಲ್ಲಿದ್ದ ಮನೆಗಳು ಹಾಗೂ ವ್ಯಾಪಾರ ಮಳಿಗೆಗಳನ್ನು ಅಧಿಕಾರಿಗಳು ತೆರವುಗೊಳಿಸಿ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆಂದು ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಷ್ಮೀಯಾ ಮಸೀದಿಯ ಜಾಗದಲ್ಲಿ 34 ಜನ ನಿವಾಸಿಗಳೊಂದಿಗೆ ವಕ್ಫ್ ಬೋರ್ಡ್ ಹೈ ಕೋರ್ಟ್ ಆದೇಶದಂತೆ ಒಪ್ಪಂದವಾಗಿದೆ. ಅಲ್ಲಿಯ ನಿವಾಸಿಗಳು ಬಾಡಿಗೆ ಸಹ ಪಾವತಿಸಿದ್ದಾರೆ. ಜಿಲ್ಲಾ ವಕ್ಫ್ ಬೋರ್ಡ್‌ಗೆ ತೆರವುಗೊಳಿಸುವ ಅಧಿಕಾರವೇ ಇಲ್ಲ. ಸಂವಿಧಾನ ವಿರೋಧಿಯಾಗಿ ಏಕಾಎಕಿ ತೆರವುಗೊಳಿಸಿರುವದು ಖಂಡನೀಯವಾಗಿದೆ.

ಹೈಕೋರ್ಟ್ ತೀರ್ಪಿನಲ್ಲಿ ನಿವಾಸಿಗಳ ಒಪ್ಪಂದ ಉಲ್ಲಂಘಿಸಿದರೆ ನ್ಯಾಯಾಂಗ ಮೊರೆ ಹೋಗುವಂತೆಯೂ ಸೂಚಿಸಿದೆ. ಆದರೆ ಅಧಿಕಾರಿಗಳು ಹಾಗೂ ವಕ್ಫ್ ಬೋರ್ಡ್ ಕಾನೂನು ಉಲ್ಲಂಘಿಸಿ ನಡೆದುಕೊಂಡಿದೆಂದು ಆರೋಪಿಸಿದರು. ನಿವಾಸಿಗಳು ನ್ಯಾಯಾವಾದಿಗಳ ಮೂಲಕ ನ್ಯಾಯಪಡೆಯುವ ಅವಕಾಶವಿದೆ. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗಕ್ಕೂ ದೂರು ನೀಡಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಹುಸೇನ ಬಾಷಾ , ನರಸಿಂಹಲು ಪೋತಗಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net