

ಚಿಕ್ಕಮಗಳೂರು: ಅಪಾರ ಮಳೆಯಿಂದಾಗಿ ಗುಡ್ಡ ಕುಸಿಯುವ ಹಂತದಲ್ಲಿರುವ ಸ್ಥಳಗಳಲ್ಲಿನ ನಿವಾಸಿಗಳಿಗೆ ಬದಲಿ ಜಾಗದ ವ್ಯವಸ್ಥೆ ಕಲ್ಪಿಸಬೇಕು. ಮಾರ್ಗಮಧ್ಯೆ ಮರದ ರೆಂಬೆ-ಕೊAಬೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಕಳವಾಸೆ, ಶಿರವಾಸೆ, ಹಡ್ಲಗದ್ದೆ, ಸುಗುಡುವಾಣಿ ಹಾಗೂ ಗಾಳಿಗುಡ್ಡೆ ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆಯಿಂದ ಅದ ಹಾನಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳು ಎಲ್ಲಿಯೇ ಹಾನಿ ಸಂಭವಿಸಿದರೂ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ರಕ್ಷಣೆ ಮಾಡಿ ಅವರಿಗೆ ಮೂಲ ಸೌಕರ್ಯ ಒದಗಿಸಲು ಮೊದಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಶಿರವಾಸೆ ಸಮೀಪದ ಹಡ್ಲಗದ್ದೆ ಸಮೀಪ ಗಿರಿಶ್ರೇಣಿಯ ಗುಡ್ಡ ಕುಸಿಯುವ ಹಂತದಲ್ಲಿರುವ ಹಿನ್ನೆಲೆ ಅನೇಕ ಕುಟುಂಬಗಳು ಜೀವಭಯದಿಂದ ಕಾಲಕಳೆಯುವಂತಾಗಿದೆ. ಹೀಗಾಗಿ ಬೇರೆಡೆ ಇಡೀ ಗ್ರಾಮವನ್ನು ಸ್ಥಳಾಂತರಿಸಲು ಕ್ರಮಕೈಗೊಂಡು ಅವರಿಗೆ ಭದ್ರತೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಒಂದೂವರೆ ದಶಕಗಳ ಹಿಂದೆ ಈ ಪ್ರಮಾಣದಲ್ಲಿ ಮಳೆಯಾಗಿತ್ತು. ಬಳಿಕ ಈ ವರ್ಷವೇ ಇಷ್ಟೊಂದು ಮಳೆಯನ್ನು ನೋಡುತ್ತಿz್ದೆÃವೆ. ಭಾರಿ ಮಳೆಯಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಬಾರದು. ಹಡ್ಲಗದ್ದೆ ನಿವಾಸಿಗಳ ಒಪ್ಪಿಗೆಯಂತೆ ಸದ್ಯದಲ್ಲೇ ಜಾಗ ಗುರುತಿಸಿ ವ್ಯವ ಸ್ಥೆ ಕಲ್ಪಿಸುವ ಭರವಸೆ ನೀಡಿದರು. ಜೊತೆಗೆ ಸ್ಥಳದಲ್ಲಿದ್ದ ಸ್ಥಳೀಯ ಅರಣ್ಯಾಧಿಕಾರಿ ಹಾಗೂ ತಾಪಂ ಇಓಗೆ ಜಾಗದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಶಿರವಾಸೆ ಮಾರ್ಗಮಧ್ಯೆ ರಸ್ತೆ ಕುಸಿದಿದೆ ಹಾಗೂ ಅಲ್ಲಲ್ಲಿ ಬೃಹದಾಕಾರದ ಮರಗಳು ಉರುಳಿರುವ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೇ ವಿದ್ಯುತ್ ಕಂಬಗಳ ಮೇಲೆ ಮರದ ಕೊಂಬೆಗಳು ಬಿದ್ದಿ ರುವ ಕಾರಣ ವಾರಗಟ್ಟಲೇ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳಿಯರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಯಿಸಿದ ಶಾಸಕರು ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾರ್ಯದಲ್ಲಿ ಮೆಸ್ಕಾಂ ನಿರತವಾಗಿದೆ ಎಂದು ಹೇಳಿದರು.
ಕಳೆದ ಅನೇಕ ದಿನಗಳಿಂದ ಸುರಿದಿರುವ ಧಾರಾಕಾರ ಮಳೆಗೆ ಶಿರವಾಸೆ ವ್ಯಾಪ್ತಿಯಲ್ಲಿ ಅನೇಕ ಮನೆಗಳು ಕುಸಿತಗೊಂಡಿವೆ. ಅಂಥ ನಿವಾಸಿಗಳಿಗೆ ಸ್ಥಳೀಯವಾಗಿ ಆಶ್ರಯ ಒದಗಿಸುವ ಕಾರ್ಯಕ್ಕೆ ಮುಂದಾಗಿz್ದÉÃವೆÉ. ಸಂಪೂರ್ಣ ಮನೆ ಕಳೆದುಕೊಂಡ ಅಜ್ಜಯ್ಯ ಸೇರಿದಂತೆ ಇಬ್ಬರಿಗೆ ತಲಾ ೧.೨೦ ಲಕ್ಷ ರೂ. ಖಾತೆಗೆ ಜಮಾವಣೆಗೊಂಡ ಪತ್ರವನ್ನು ವಿತರಿಸಿದರು.
ಈ ಭಾರಿ ಅಪಾರ ಮಳೆಯಿಂದ ಶಿರವಾಸೆ ಸುತ್ತಮುತ್ತಲು ೫೦ ಲಕ್ಷ ರೂ. ಮೌಲ್ಯದ ಆಸ್ತಿ ಹಾನಿ ಗೊಂಡಿದೆ ಎಂದು ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಅಧಿಕಾರಿಗಳು ಅಂದಾಜಿಸಿದ್ದು, ಸರ್ಕಾರ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಿದರೆ ಹೆಚ್ಚಿನ ಮಟ್ಟದಲ್ಲಿ ಪರಿಹಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಶಿರವಾಸೆ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಗ್ರಾಮಸ್ಥರ ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆ ಅಹವಾಲು ಪಡೆದುಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿ ಮುಂದಿನ ಬಗರ್‌ಹುಕುಂ ಸಭೆಯೊಳಗೆ ಅನೇಕ ವರ್ಷಗಳಿಂದ ವಾಸಿಸುತ್ತಿರುವ ನಿವೇಶನರಹಿತರಿಗೆ ಹಕ್ಕುಪತ್ರ ವಿತರಿಸ ಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಮಂತ್, ತಾಪಂ ಕಾರ್ಯನಿರ್ವಹಣಾಧಿಕಾರಿ ತಾರಾನಾಥ್, ಶಿರವಾಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷೆ ರಾಧಮ್ಮ, ಸದಸ್ಯರಾದ ರವಿ, ಗಣೇಶ್, ವಿಮಲ, ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರವೀಣ್‌ಬೆಟ್ಟಗೆರೆ, ಬಗರ್‌ಹುಕುಂ ಸಮಿತಿ ಸದಸ್ಯ ಕೆಂಗೇಗೌಡ, ಗ್ಯಾರಂಟಿ ಪ್ರಾಧಿಕಾರದ ತಾಲೂಕು ಸದಸ್ಯ ನರೇಂದ್ರಗೌಡ, ಕಾಂಗ್ರೆಸ್ ಜಾಗರ ಹೋಬಳಿ ಅಧ್ಯಕ್ಷ ಪ್ರಸನ್ನ, ಮುಖಂಡರಾದ ಬಿ.ವಿ.ಕೃಷ್ಣಮೂರ್ತಿ, ಮನ್ಸೂರ್ ಮತ್ತಿತರರಿದ್ದರು.