ಅಪಾಯಕಾರಿ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಿ

meeting (1)
ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತುರ್ತು ಸಭೆ ನಡೆಸಿದರು. ಉಮಾ ಪ್ರಶಾಂತ್, ರಾಜೇಶ್, ಸೋಮಶೇಖರ್ ಇತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನಾಹುತಗಳು ಸಂಭವಿಸುವ ಸ್ಥಳಗಳಿರುವ ಜನರು ಯಾವುದೇ ರೀತಿ ತೊಂದರೆಗೆ ಒಳಗಾಗದಂತೆ ಎಚ್ಚರವಹಿಸಬೇಕು. ತೀರಾ ಅಪಾಯಕಾರಿ ಸ್ಥಳದಿಂದ ಜನರನ್ನು ಸ್ಥಳಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮಳೆ ಸಂಬಂಧ ತುರ್ತು ಸಭೆ ನಡೆಸಿ ಮಾಹಿತಿ ಪಡೆದುಕೊಂಡು ಮಾತನಾಡಿದ ಅವರು, ವಿಪತ್ತು ನಿರ್ವಹಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಸಿಬ್ಬಂದಿ ರಜೆ ಹಾಕಬಾರದು ಎಂದು ತಿಳಿಸಿದರು.
ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿರುವ ಅನಾಹುತಗಳ ಮಾಹಿತಿದೆ. ಆ ಸ್ಥಳಗಳಲ್ಲಿ ಈಗಿನಿಂದಲೇ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗುಡ್ಡ, ಗಿರಿ ಭಾಗದಲ್ಲಿ ಕುಸಿಯುವ ಮೂನ್ಸೂಚನೆಯಿದ್ದರೆ ಸಮೀಪದಲ್ಲಿರುವ ಜನರನ್ನು ಸ್ಥಳಾಂತರ ಮಾಡಬೇಕು ಎಂದು ಹೇಳಿದರು.
ಮಳೆಯಿಂದಾಗಿ ಮನೆ, ದನದ ಕೊಟ್ಟಿಗೆ, ವಿದ್ಯುತ್ ಕಂಬಗಳು ಬಿದ್ದರೆ ತುರ್ತಾಗಿ ಸರಿಪಡಿಸಬೇಕು. ಯಾವುದೇ ರೀತಿ ನಷ್ಟ ಅನುಭವಿಸಿದ್ದಲ್ಲಿ ತುರ್ತು ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಎಸ್ಪಿ ಉಮಾ ಪ್ರಶಾಂತ್, ಎಸಿ ರಾಜೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.
ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಜು.23ರಂದು ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.15ಕ್ಕೆ ಉತ್ತಮೇಶ್ವರ ಸೇತುವೆ, 11.45ಕ್ಕೆ ಹೆಗ್ಲಾರು ಕೂಡಿನ ಭೂ ಕುಸಿತ ಪ್ರದೇಶ, ಮಧ್ಯಾಹ್ನ 12.45ಕ್ಕೆ ಕೊಗ್ರೆ ಸೇತುವೆ, 1.15ಕ್ಕೆ ಬಸರೀಕಟ್ಟೆ, 1.50ಕ್ಕೆ ಹುತ್ತಿನಗದ್ದೆಯಲ್ಲಿ ಹಾನಿ ವೀಕ್ಷಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net