

ಆನೇಕಲ್:ಕನ್ನಡಿಗರೇ ನಿರ್ಮಾಣ ಮಾಡಿರುವ ಎಲೆಕ್ಟ್ರಿಕ್ ಬೈಕ್ ಯುರೋಪ್ಗೆ ರಫ್ತು ಆಗುತ್ತಿರುವುದು ಮಾದರಿ ಎನಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲೆಕ್ಟ್ರಿಕ್ ವಾಹನ ಉದ್ಯಮ ೇತ್ರದಲ್ಲಿ ಮೈಲಿಗಲ್ಲು ಎಂದು ಪರಿಗಣಿಸಿರುವ ಬೆಳವಣಿಗೆಯಲ್ಲಿ ಕನ್ನಡಿಗರದ್ದೇ ಆದ ಅಲ್ಟ್ರಾವಯಲೆಟ್ ಆಟೊಮೋಟಿವ್ ಮಂಗಳವಾರ ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಗಳಿಗೆ ಮೇಡ್ ಇನ್ ಇಂಡಿಯಾ ಎಫ್ 77 ಮಾಚ್ 2 ಅಧಿಕ ಸಾಮರ್ಥ್ಯದ ಎಲೆಕ್ಟ್ರಿಕ್ ಬೈಕ್ಗಳನ್ನು ರಫ್ತು ಮಾಡುವ ಪ್ರಕ್ರಿಯೆಗೆ ಜಿಗಣಿಯಲ್ಲಿರುವ ಕಂಪನಿಯ ಉತ್ಪಾದನಾ ಟಕದಲ್ಲಿ ಚಾಲನೆ ನೀಡಿ ಮಾತನಾಡಿದರು.
ಅಲ್ಟ್ರಾವಯಲೆಟ್ನ ಎಲೆಕ್ಟ್ರಿಕ್ ಬೈಕ್ಗಳ ರಫ್ತು ಭಾರತದ ಆಟೋಮೊಟಿವ್ ಉದ್ಯಮದಲ್ಲಿ ಪ್ರಮುಖ ಟ್ಟ ಎನಿಸಲಿದೆ. ಜಾಗತಿಕವಾಗಿ ಭಾರತದ ಉತ್ಪನ್ನಗಳು ಪೈಪೋಟಿ ನೀಡುವ ಸಾಮರ್ಥ್ಯಕ್ಕೆ ಇದು ಪುಷ್ಠಿ ನೀಡಿದೆ. ಭಾರತದ ನವೋದ್ಯಮಗಳು ಎಲೆಕ್ಟ್ರಿಕ್ ಮೊಬಿಲಿಟಿಯಂಥ ೇತ್ರದಲ್ಲಿಯೂ ಹೊಸತನಕ್ಕೆ ಪ್ರಾಮುಖ್ಯತೆ ನೀಡುತ್ತಿವೆ ಎನ್ನುವುದಕ್ಕೆ ಇದು ಸಾಯಾಗಿದೆ. ಭಾರತವನ್ನು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವಲಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಂದಿರುವ ದೂರದೃಷ್ಟಿಗೆ ಇದು ಪೂರಕವಾಗಿದೆ ಎಂದು ಹೇಳಿದರು. ಅಲ್ಟ್ರಾವಯಲೆಟ್ನ ಸಹಸ್ಥಾಪಕ ಮತ್ತು ಸಿಇಒ ನಾರಾಯಣ್, ಸುಬ್ರಮಣಿಯಮ್, ಅಲ್ಟ್ರಾವಯಲೆಟರ್ನ ಸಹ ಸ್ಥಾಪಕ ಮತ್ತು ಸಿಟಿಒ ನೀರಜ್ ರಾಜಮೋಹನ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್, ಬಿಜೆಪಿ ಮುಖಂಡರಾದ ದೇವರಾಜು, ದೊಡ್ಡ ಹಾಗಡೆ ಶಂಕರ್, ಶ್ರೀನಿವಾಸ್, ವೆಂಕಟೇಶ್ ಇದ್ದರು.
ಬೆಂಗಳೂರು ಮುಂಚೂಣಿ: ಭಾರತದ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಜಾಗತಿಕ ಗುಣಮಟ್ಟದ ಬೈಕ್ಗಳನ್ನು ತಯಾರಿಸಿ ರಫ್ತು ಮಾಡುತ್ತಿರುವ ಅಲ್ಟ್ರಾವಯಲೆಟ್ ಕಂಪೆನಿಯನ್ನು ಭಾರತದ ಟೆಸ್ಲಾ ಎಂದೂ ಬಣ್ಣಿಸಬಹುದು. ಕಂಪನಿಯ ಯಶಸ್ಸು ನಮ್ಮಲ್ಲಿರುವ ನಾವೀನ್ಯತೆಗೆ ಪೋತ್ಸಾಹ ನೀಡುವ ವಾತಾವರಣಕ್ಕೆ ಸಾಯಾಗಿದೆ. ಸುಸ್ಥಿರ ಅಭಿವೃದ್ಧಿ ಮತ್ತು ತಂತ್ರಾನ ನಾಯಕತ್ವದ ಪ್ರಯಾಣದಲ್ಲಿ ಈ ರಫ್ತು ಹೊಸ ಅಧ್ಯಾಯ ಬರೆಯಲಿದೆ.
ಬ್ಯಾಟರಿ ನಿರ್ಮಾಣಕ್ಕೆ ಹೈಟೆಕ್ ಟೆಕ್ನಾಲಜಿ: ರಾಜ್ಯದವರಾದ ನಾರಾಯಣ ಹಾಗೂ ನೀರಜ್ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಐತಿಹಾಸಿಕ ಬೆಂಗಳೂರು ನಗರಕ್ಕೆ ಹಾಗೂ ಕರ್ನಾಟಕ ಹಾಗೂ ದೇಶಕ್ಕೆ ಹೆಮ್ಮೆ ತರುವ ವಿಚಾರವಾಗಿದೆ. ಬೃಹತ್ ಕೈಗಾರಿಕಾ ಸಚಿವನಾಗಿ ನನಗೂ ಹೆಮ್ಮೆ ಇದೆ. ಈ ಕಂಪನಿ ನಿರ್ಮಾಣಕ್ಕೆ ಸಾಕಷ್ಟು ಶ್ರಮ ಅಡಗಿದೆ, ಅಂತಾರಾಷ್ಟ್ರೀಯ ಮಟ್ಟದ ಕ್ವಾಲಿಟಿ ಮೂಲಕ ಬೈಕ್ ನಿರ್ಮಾಣ ಮಾಡಿದ್ದಾರೆ, ಬ್ಯಾಟರಿ ನಿರ್ಮಾಣಕ್ಕೆ ಹೈಟೆಕ್ ಟೆಕ್ನಾಲಜಿ ಬಳಸಿದ್ದಾರೆ. ಯುರೊಪಿಯನ್ ಮಾರ್ಕೇಟ್ಗೆ ಎಕ್ಸ್
ಪೋರ್ಟ್ ಮಾಡಲು ಮುಂದಾಗಿದ್ದಾರೆ, ಇದಕ್ಕೆ ಗುಣಮಟ್ಟದ ಕಾಳಜಿಯೂ ಹೆಚ್ಚಾಗಿ ಬೇಕಾಗುತ್ತದೆ.ಬೆಂಗಳೂರು ನಗರಕ್ಕೂ ಇಂದೊಂದು ಗರಿ ಆಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.