ಎಥೆನಾಲ್ ಮೈಲೇಜ್ ಪೆಟ್ರೋಲ್‌ಗೆ ಸಮ : ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ

NITHINGADKARI
Published on

ಮೈಸೂರು: ಎಥೆನಾಲ್ ಮೈಲೇಜ್ ಪೆಟ್ರೋಲ್‌ಗೆ ಸಮಾನವಾಗಿದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದ್ದು, ಎಥೆನಾಲ್ ಬಳಕೆ ಪ್ರಮಾಣ ಹೆಚ್ಚಳದಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದು ಪ್ರಮಾಣ ಕಡಿಮೆ ಮಾಡಲು ಸಹಕಾರಿಯಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿತ್ ಗಡ್ಕರಿ ಹೇಳಿದರು.

ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಹಮ್ಮಿಕೊಂಡ ‘ಅಂತಾರಾಷ್ಟ್ರೀಯ ಸ್ವಚ್ಛ ಇಂಧನ ಸಮಾವೇಶದಲ್ಲಿ’ ಆನ್‌ಲೈನ್ ಮೂಲಕ ಪಾಲ್ಗೊಂಡು ‘ವಿಕಸನಗೊಳ್ಳುತ್ತಿರುವ ಭಾರತೀಯ ಜೈವಿಕ ಇಂಧನ ಪರಿಸರ ವ್ಯವಸ್ಥೆ ಮತ್ತು ಹೂಡಿಕೆಯ ಅವಕಾಶಗಳು’ ಷಯದ ಕುರಿತು ಮಾತನಾಡಿ, ಎಥೆನಾಲ್ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಇದು ಸೂಕ್ತ ಸಮಯವಾಗಿದೆ. ಇಂಧನ ಕ್ಷೇತ್ರದಲ್ಲಿ ಇತ್ತೀಚೆಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಆ ಸಂಶೋಧನೆಗಳು ದೇಶಕ್ಕೆ ಹೊಸ ದೃಷ್ಟಿಕೋನವನ್ನು ನೀಡಬಲ್ಲದು ಎಂದರು.

ಜೈವಿಕ ಇಂಧನವು ಕಟ್ಟಕಡೆಯ ಮನುಷ್ಯನ ಬದುಕನ್ನು ಬದಲಾಯಿಸಬಲ್ಲದು. ಜ್ಞಾನ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ತ್ಯಾಜ್ಯವನ್ನು ಸಂಪತ್ತನ್ನಾಗಿ ಮಾಡಬಹುದು. ಇಂದು ಸಾಕಷ್ಟು ನವೀನ ಸಂಶೋಧನೆಗಳು ಲಭ್ಯವಿದ್ದು, ವಾಣಿಜ್ಯ ದೃಷ್ಟಿಯಿಂದಲೂ ನಾವು ಯಶಸ್ಸು ಕಾಣಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net