ದೇವರ ಕೆಲಸದಲ್ಲಿರಲಿ ಶ್ರದ್ಧೆ : ದಿವಾಣ ಗೋವಿಂದ ಭಟ್ ಸಲಹೆ

New Project (9)
Published on

ಬದಿಯಡ್ಕ: ಕಲಬೆರಕೆ ರಹಿತವಾಗಿ ದೇವರ ಕೆಲಸದಲ್ಲಿ ಶ್ರದ್ಧೆ, ದಾನದಿಂದ ಗುರಿ ತಲುಪಬಹುದು ಎಂದು ಉದ್ಯಮಿ ದಿವಾಣ ಗೋವಿಂದ ಭಟ್ ತಿಳಿಸಿದರು.

ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶ್ರಮದಾನ ಸೇವೆ ನಿಮಿತ್ತ ಸೋಮವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಆಡಳಿತ ಮೊಕ್ತೇಸರ ವೈ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೆನರಾ ಬ್ಯಾಂಕ್ ಬಡಾವಣೆಯ ಸಂಪತ್ ಗಣಪತಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೈ.ಶಿವರಾಮ ಭಟ್, ಮಾತೃ ಮಂಡಳಿ ಮುಖ್ಯಸ್ಥೆ ಉಷಾ ಶಾಮ ಭಟ್ ಉಪಸ್ಥಿತರಿದ್ದರು.

ಚೈತ್ರಾ ಅಶ್ವಿನಿ ಬದಿಯಡ್ಕ, ಕಿರಣಾ ಕೃಷ್ಣ್ಣ ಮೂರ್ತಿ, ಸುಧಾ ಮಾಣಿತ್ತೋಡಿ, ಡಾ.ಅನ್ನಪೂರ್ಣೇಶ್ವರಿ ಏತಡ್ಕ ಶಿವಾರ್ಪಣಂ ಆಶಯ ಗೀತೆ ಹಾಡಿದರು. ಸಮಿತಿ ಸಹ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಸಂಯೋಜಕ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರು ಹೈಕೋರ್ಟ್ ವಕೀಲ ವೈ.ಎಚ್.ಗಣೇಶ್ ಈ ಸೇವೆಯನ್ನು ಪ್ರಾಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net