ಸರ್ಕಾರದ ಅನುದಾನ ಸಮರ್ಪಕ ಬಳಕೆಯಾಗಲಿ

29 nrp 3 (1)
ಎನ್.ಆರ್.ಪುರದ ಕಡಹಿನಬೈಲು ಗ್ರಾಪಂನಲ್ಲಿ ನಡೆದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ವಿವಿಧ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಲಾಯಿತು. ಶೈಲಾ ಮಹೇಶ್, ಸುನಿಲ್ ಕುಮಾರ್, ರವೀಂದ್ರ, ಚಂದ್ರಶೇಖರ್, ವಾಣಿ ನರೇಂದ್ರ, ಅಶ್ವಿನಿ, ಪೂರ್ಣಿಮಾ, ಲಿಲ್ಲಿಮಾತು ಕುಟ್ಟಿ, ವಿಂದ್ಯಾ ಇದ್ದರು.
Published on

ಎನ್.ಆರ್.ಪುರ: ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನದ ಸಮಗ್ರ ಅನುಷ್ಠಾನವೇ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಮುಖ್ಯ ಉದ್ದೇಶ ಎಂದು ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಹಾಗೂ ಕಡಹಿನಬೈಲು ಗ್ರಾಪಂ ನೋಡಲ್ ಅಧಿಕಾರಿ ರಮೇಶ್ ಹೇಳಿದರು.
ಕಡಹಿನಬೈಲು ಗ್ರಾಪಂನಲ್ಲಿ ನಡೆದ 2023-24 ನೇ ಸಾಲಿನ ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಮಾತನಾಡಿ, ಗ್ರಾಮಸ್ಥರಿಗೆ ಗ್ರಾಮಸಭೆ ಎಂದಾಕ್ಷಣ ಸಾಮಾನ್ಯ ಗ್ರಾಮಸಭೆ ಎಂದು ಭಾವಿಸಿ ಅವರ ಸಮಸ್ಯೆಗಳನ್ನು ಚರ್ಚಿಸಲು ಬರುತ್ತಾರೆ. ಆದರೆ ಗ್ರಾಪಂ ಅಧಿಕಾರದ ವ್ಯಾಪ್ತಿಯಲ್ಲಿ ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ ಗ್ರಾಮ ಸಭೆಗಳು ನಡೆಯುತ್ತವೆ. ಆಯಾಯ ವಿಷಯ, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾತ್ರ ಚರ್ಚೆ, ತೀರ್ಮಾನಗಳ ನಡವಳಿಯಾಗುತ್ತವೆ. ಎಲ್ಲ ಜನರು ಸರ್ಕಾರದ ವಿವಿಧ ಯೋಜನೆಗಳ ಗ್ರಾಮಸಭೆಗಳಲ್ಲಿ ಭಾಗವಹಿಸಿ ಅದರ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಪರಿಶೋಧನಾ ಅನುಷ್ಠಾನಾಧಿಕಾರಿ ಸುಶ್ಮಿತಾ ಮಾತನಾಡಿ, ಈ ಬಾರಿ ಗ್ರಾಪಂ 15ನೇ ಹಣಕಾಸು ಯೋಜನೆ, ಜಿಪಂ ಹಾಗೂ ತಾಪಂ ಅನುದಾನದ ಸದ್ಬಳಕೆ ಹಾಗೂ ಕೈಗೊಂಡ ಕಾಮಗಾರಿಗಳ ಪರಿಶೋಧನೆ ಮಾಡಲಾಗುವುದು. ಗ್ರಾಮಸ್ಥರ ಮುಂದೆ ಸಮಗ್ರವಾಗಿ ವಿವರ ಮಾಹಿತಿ ನೀಡಿ ಆಕ್ಷೇಪಣೆಗಳಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪಾರದರ್ಶಕ ಆಡಳಿತ ನಡೆಸಲು ಈ ಪರಿಶೋಧನಾ ಸಭೆ ನಡೆಸಲಾಗುತ್ತದೆ. ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಕೆಲವು ಕಾಮಗಾರಿಗಳ ಸ್ಥಳಗಳಲ್ಲಿ ನಾಮಫಲಕಗಳನ್ನು ಅಳವಡಿಸಿಲ್ಲ . ಕೂಡಲೇ ನಾಮಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net