

ಆನೇಕಲ್: ಜನೌಷಧ ಕೇಂದ್ರದಂತೆ ಆಯುಷ್ ಔಷಧ ಕೇಂದ್ರಗಳನ್ನು ಶ್ರೀದಲ್ಲೇ ತೆರೆಯಲಾಗುವುದು ಎಂದು ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಪ್ರತಾಪ್ ರಾವ್ ಜಾದವ್ ತಿಳಿಸಿದರು.
ಜಿಗಣಿಯ ಎಸ್.ವ್ಯಾಸ ವಿವಿಯಲ್ಲಿ ಕೇಂದ್ರ ಆಯುಷ್ ಸಚಿವಾಲಯದ ಅನುದಾನದಲ್ಲಿ ನಿರ್ಮಿತವಾದ ಸೆಂಟರ್ ಆಫ್ ಎಕ್ಸಲೆನ್ಸ್ ಬ್ಲಾಕ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಇನ್ನು ಮುಂದೆ ಆಯುಷ್ ಕೇಂದ್ರದಲ್ಲಿ ಆಯುರ್ವೇದ, ಹೊಮಿಯೋಪಥಿ, ಯುನಾನಿ, ಸಿದ್ಧದಂತಹ ಹಲವು ದೇಸಿ ಔಷಧಗಳು ಲಭ್ಯವಾಗಲಿವೆ. ಧನ್ವಂತರಿ, ಶುಶ್ರುಷ, ಚರಕನಂತಹ ಋಷಿಮುನಿಗಳು ಸನಾತನ ಕಾಲದಿಂದಲೂ ನಡೆಸಿಕೊಂಡು ಬಂದಿದ್ದ ದೇಸಿ ವೈದ್ಯ ಪದ್ಧತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರ ಅಡಿಪಾಯ ಹಾಕಿ, ಕೈಗೆಟುಕುವ ಬೆಲೆಗೆ ಗುಣಮಟ್ಟದ ಔಷಧ ಜನಸಾವಾನ್ಯರಿಗೆ ಸಿಗುವಂತೆ ಯೋಜನೆ ರೂಪಿಸಿದ್ದಾರೆ. ಇಂದು ಎಲ್ಲ ದೇಶವಾಸಿಗಳಿಗೆ ಸಮಗ್ರ ವೈದ್ಯ ಪದ್ಧತಿ ಅಡಿಯಲ್ಲಿ ಚಿಕಿತ್ಸೆ ದೊರೆಯುತ್ತಿದ್ದು, ಅರೋಗ್ಯವಂತ ಸವಾಜ ನಿರ್ವಾಣ ಸರ್ಕಾರದ ಧ್ಯೇಯ ಎಂದರು.
ವೇದಿಕೆಯಲ್ಲಿ ವಿಸಿ ಮಂಜುನಾಥ್ ಶರ್ಮ, ಡಾ.ಬಿ.ಆರ್.ರಾಮಕೃಷ್ಣ, ರಾವೇಂದ್ರರಾವ್, ಡಾ.ಅಮಿತ್, ಡಾ.ರಮೇಶ್, ಡಾ.ಶಿವಶಂಕರ ಸಾಯಿ, ರಾಹುಲ್ ಸೋಲಂಕಿ ಹಾಗೂ ರಾಜ್ಯ ಆಯುಷ್ ಸಚಿವಾಲಯ ಅಧಿಕಾರಿಗಳು ಇದ್ದರು.
ಉತ್ತಮ ಫಲಿತಾಂಶ
ಕೇಂದ್ರ ಆಯುಷ್ ಇಲಾಖೆ ಸಹಯೋಗದೊಂದಿಗೆ ಮಧುಮೇಹ ನಿಯಂತ್ರಣ, ಕ್ಯಾನ್ಸರ್ ತಡೆಗಟ್ಟುವಿಕೆ, ಪಾರ್ಶ್ವವಾಯು ಚಿಕಿತ್ಸೆ ಸೇರಿ ವಿವಿಧ ಔಷಧಗಳು ಉತ್ತಮ ಫಲಿತಾಂಶ ನೀಡಿವೆ. ದೇಶ ವಿದೇಶಗಳಲ್ಲಿ ಯೋಗ ದೈನಂದಿನ ದಿನಚರಿಯಾಗಿದ್ದು, ಭಾರತೀಯರು ಯೋಗ ವಾಡುವುದನ್ನು ಮತ್ತೆ ಪ್ರಾರಂಭಿಸಬೇಕಿದೆ. ನಮ್ಮ ಸಂಶೋಧನಾ ಪ್ರಬಂಧಗಳು ವಿದೇಶಗಳಲ್ಲೂ ವಾನ್ಯತೆ ಪಡೆದಿದೆ. ಆಯುಷ್ ಇಲಾಖೆ ಬಿಡುಗಡೆ ವಾಡುವ ವಾರ್ಷಿಕ ಅನುದಾನವನ್ನು ಕಾರ್ಯಕ್ಷಮತೆ ಆಧರಿಸಿ ದುಪ್ಪಟ್ಟು ವಾಡಬೇಕು ಎಂದು ಎಸ್.ವ್ಯಾಸ ವಿವಿ ಕುಲಾಧಿಪತಿ ಪದ್ಮಶ್ರೀ ಡಾ.ಎಚ್.ಆರ್.ನಾಗೇಂದ್ರ ಮನವಿ ವಾಡಿದರು.
ಉತ್ತರ ಭಾರತೀಯರು ಸಾವಾನ್ಯವಾಗಿ ದೀಪಾವಳಿ ಹಬ್ಬದಲ್ಲಿ ಧನ ತೇರಸ್‌ದಂದು ಲಕ್ಷ್ಮೀದೇವಿ ಪೂಜೆ ವಾಡುತ್ತಾರೆ. ಗಳಿಸಿದ್ದನ್ನು ಅನುಭವಿಸಲು ಆರೋಗ್ಯ ಭಾಗ್ಯವೂ ಬೇಕಿದ್ದು, ಅಂದು ಶ್ರೇಷ್ಠ ವೈದ್ಯ ಧನ್ವಂತರಿ ಋಷಿಯ ಪೂಜೆಯನ್ನು ಶ್ರದ್ಧೆಯಿಂದ ವಾಡಿ. -ಪ್ರತಾಪ್ ರಾವ್ ಜಾಧವ್, ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ