

ಬೆಂಗಳೂರು: ಲೋಕಸಭಾ ಚುನಾವಣೆ ಸಂಬಂಧ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳ (ಎವಿಇಎಸ್) ಸಿಬ್ಬಂದಿಗಳಿಗೆ ಮತ ಚಲಾಯಿಸಲು ಮೂರೂ ಕ್ಷೇತ್ರಗಳಲ್ಲೂ ಅಂಚೆ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ.
ನಗರದ ಮೂರೂ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,348 ಅಗತ್ಯ ಸೇವೆಗಳ ಸಿಬ್ಬಂದಿಯು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಗತ್ಯ ಸೇವೆ ಸಿಬ್ಬಂದಿಗಳಿಗೆ ಏ.19ರಿಂದ 21ರವರೆಗೆ ಮೂರು ದಿನ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಅಂಚೆ ಮತದಾನ ಕೇಂದ್ರ ಸ್ಥಾಪಿಸಿರುವ ಸ್ಥಳಗಳ ವಿವರ:
ಬೆಂ. ಕೇಂದ್ರ ಕ್ಷೇತ್ರ - ಚುನಾವಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 17, ನೆಲ ಮಹಡಿ, ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿಗಳ ಕಚೇರಿ ಪಕ್ಕ, ಬಿಬಿಎಂಪಿ ಕೇಂದ್ರ ಕಚೇರಿ, ನರಸಿಂಹರಾಜ ವೃತ್ತ.
ಬೆಂ. ದಕ್ಷಿಣ ಕ್ಷೇತ್ರ - ಚುನಾವಣಾಧಿಕಾರಿಗಳ ಕಚೇರಿ, ವಲಯ ಆಯುಕ್ತರು (ದಕ್ಷಿಣ) ಕಾರ್ಯಾಲಯ, 2ನೇ ಮಹಡಿ, ಮಹಾನಗರ ಪಾಲಿಕೆ ಕಚೇರಿಗಳ ಸಂಕೀರ್ಣ, 9ನೇ ಕ್ರಾಸ್, 2ನೇ ಬ್ಲಾಕ್, ಜಯನಗರ.
ಬೆಂ. ಉತ್ತರ ಕ್ಷೇತ್ರ - ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೇಂದ್ರ ಸಂಘ ಕಟ್ಟಡ, ಸಭಾಂಗಣ, ನೆಲಮಹಡಿ, ಕಂದಾಯ ಭವನ ಹಿಂಬಾಗ, ಕೆಂಪೇಗೌಡ ರಸ್ತೆ ಬೆಂಗಳೂರು.
ಕ್ಷೇತ್ರವಾರು ಎವಿಇಎಸ್ ಮತದಾರರು:
ಲೋಕಸಭಾ ಕ್ಷೇತ್ರ ಮತ
ಬೆಂಗಳೂರು ಉತ್ತರ 469
ಬೆಂಗಳೂರು ದಕ್ಷಿಣ 653
ಬೆಂಗಳೂರು ಸೆಂಟ್ರಲ್ 226