

ಹುಬ್ಬಳ್ಳಿ: ಇಲ್ಲಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಹೊಸದಾಗಿ ಪ್ಲಂಬಿಂಗ್ ತರಬೇತಿ ಶಾಲೆ ಸ್ಥಾಪಿಸಲಾಗಿದ್ದು, ತರಬೇತಿ ಪಡೆಯಲು ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ತಾಂತ್ರಿಕ ಸೌಕರ್ಯ ಹಾಗೂ ಪ್ರಾತ್ಯಕ್ಷಿಕೆ, ತರಬೇತಿಗಾಗಿ ಆಧುನಿಕ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇದು ರಾಜ್ಯದ ಸರ್ಕಾರಿ ವಲಯದ ಮೊದಲ ಪ್ಲಂಬಿಂಗ್ ತರಬೇತಿ ಕೇಂದ್ರವಾಗಿದೆ.
8ನೇ ತರಗತಿ ಅಥವಾ ಹತ್ತನೇ ತರಗತಿ ಉತ್ತೀರ್ಣರಾದ 16ರಿಂದ 30 ವಯೋಮಿತಿಯೊಳಗಿನ ಎಲ್ಲ ವರ್ಗದ ಯುವಕರು ಈ ತರಬೇತಿಗೆ ಅರ್ಹರು. ತರಬೇತಿ ಸಂಪೂರ್ಣ ಉಚಿತವಾಗಿದ್ದು, ಬಸ್‌ಪಾಸ್ ಮೊತ್ತ ಮರುಪಾವತಿ ಸೌಲಭ್ಯ ಇರುತ್ತದೆ.
ಪಠ್ಯದ ಜತೆಗೆ ಜೀವನ ಕೌಶಲ, ಉದ್ಯಮಶೀಲತೆ ಮತ್ತು ಸಂವಹನ ಕೌಶಲಗಳನ್ನು ಕಲಿಸಲಾಗುವುದು. ತರಬೇತಿ ನಂತರ ಪ್ಲಂಬಿಂಗ್ ಗುತ್ತಿಗೆದಾರರ ಬಳಿ ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗ ಒದಗಿಸಲು ಸಹಯೋಗ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಜು. 28ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ, ಕೈಗಾರಿಕಾ ವಸಾಹತು, ಗೋಕುಲ ರಸ್ತೆ, ಹುಬ್ಬಳ್ಳಿ ಸಂಪರ್ಕಿಸಲು ಜಿಟಿಟಿಸಿ ಪ್ರಾಂಶುಪಾಲ ಮಾರುತಿ ಭಜಂತ್ರಿ ಕೋರಿದ್ದಾರೆ.