ಲಘು ಉದ್ಯೋಗ ಭಾರತಿ ಹು-ಧಾ ಘಟಕ ಸ್ಥಾಪನೆ

New Udyoga Bharati New
Published on

ಹುಬ್ಬಳ್ಳಿ : ಲಘು ಉದ್ಯೋಗ ಭಾರತಿ ಹುಬ್ಬಳ್ಳಿ-ಧಾರವಾಡ ಘಟಕ ಸ್ಥಾಪನೆ ಸಮಾರಂಭ ಮತ್ತು ಹೊಸ ಮಹಿಳಾ ಏಕಾಯಿ (ಮಹಿಳಾ ಉದ್ಯಮಿ ಕೋಶ) ಉದ್ಘಾಟನೆ ಸಮಾರಂಭ ನಗರದಲ್ಲಿ ಇತ್ತೀಚೆಗೆ ಜರುಗಿತು.

ಅತಿಥಿಯಾಗಿದ್ದ ಲಘು ಉದ್ಯೋಗ ಭಾರತಿ ಕರ್ನಾಟಕ ಘಟಕದ ಅಧ್ಯಕ್ಷ ಕೆ. ನಾಯಾಯಣ ಪ್ರಸನ್ನ ಮಾತನಾಡಿ, ನವೆಂಬರ್ 6 ರಿಂದ 8ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಉತ್ಪಾದನಾ ಪ್ರದರ್ಶನದ 7ನೇ ಆವೃತ್ತಿಯ ಕುರಿತು ವಿವರಿಸಿದರು.

ಪ್ರದರ್ಶನದಲ್ಲಿ ಎಂಎಸ್​ಎಂಇಗಳು ಸರ್ಕಾರದ ಬೆಂಬಲ, ಭಾಗವಹಿಸುವಿಕೆ ಮತ್ತು ನೆಟ್​ವರ್ಕಿಂಗ್ ಅವಕಾಶಗಳಿಂದ ಪ್ರಯೋಜನ ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಿದರು.

ಐಎಂಎಸ್ ಫೌಂಡೇಶನ್​ನ ಸಂಬೀತ ಮಾತನಾಡಿ, ಭಾರತ ಉತ್ಪಾದನಾ ಪ್ರದರ್ಶನಕ್ಕಾಗಿ ಈಗಾಗಲೇ 400ಕ್ಕೂ ಹೆಚ್ಚು ಮಳಿಗೆಗಳು ಮತ್ತು ಶೇ. 80-85ರಷ್ಟು ಬುಕಿಂಗ್​ಗಳು ಪೂರ್ಣಗೊಂಡಿವೆ ಎಂದರು.

ಎಂ.ಎಂ. ಇಂಡಸ್ಟ್ರೀಸ್ ಕಂಟ್ರೋಲ್ಸ್ ಪ್ರೖೆವೇಟ್ ಲಿಮಿಟೆಡ್​ನ ವ್ಯವಸ್ಥಾಪಕ ಸುಧೀರ ಮಾಡೆ ಅತಿಥಿಯಾಗಿದ್ದರು. ವಿಕ್ರಾಂತ ಸೈಗಲ್ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.

ಉದ್ಯಮಿ ರಾಜು ಪಾಟೀಲ ಮಾತನಾಡಿದರು. ಪ್ರಸಾದ ಪಾವಟೆ ಅವರು ಹುಬ್ಬಳ್ಳಿ-ಧಾರವಾಡ ಅಧ್ಯಾಯದ (2023-25)ನೇ ಸಾಲಿನ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು.

2025-27ನೇ ಸಾಲಿನ ನೂತನ ಅವಧಿಗೆ ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಶಾಂತ ಹೆಬಸೂರ, ಉಪಾಧ್ಯಕ್ಷರಾಗಿ ಪ್ರಸಾದ ಪಾವಟೆ, ಕಾರ್ಯದರ್ಶಿಯಾಗಿ ಅಲೋಕ ಅಂಕಲಿಕರ್, ಜಂಟಿ ಕಾರ್ಯದರ್ಶಿಯಾಗಿ ವಿನಾಯಕ ಮಠದ ಹಾಗೂ 15 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಲಹೆಗಾರರಾಗಿ ಸುಧೀರ ಮಾಂಡೆ, ಎಸ್.ಡಿ. ಭಟ್ ಆಯ್ಕೆಯಾದರು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಏಕಾಯಿ ಉದ್ಘಾಟಿಸಲಾಯಿತು. ಪ್ರಸಕ್ತ ಅವಧಿಯ ಮಹಿಳಾ ಏಕಾಯಿ ಅಧ್ಯಕ್ಷರಾಗಿ ಸವಿತಾ ಗುಂಜಾಲ, ಕಾರ್ಯದರ್ಶಿಯಾಗಿ ಅಪರ್ಣಾ ಪೂಜಾರ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net