ಯದರೂರು ಬಳಿ ಕೈಗಾರಿಕೆಗಳ ಸ್ಥಾಪನೆ...?

30klr2- edaruru story
Published on

ಕೋಲಾರ: ಬರಪೀಡಿತ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣವಿದ್ದು, ಶ್ರೀನಿವಾಸಪುರ ವ್ಯಾಪ್ತಿ ಯದರೂರು ಬಳಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಮಾಲೂರು, ಕೋಲಾರ ತಾಲೂಕು ನರಸಾಪುರ, ವೇಮಗಲ್​ ಭಾಗದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಬೃಹತ್​ ಕೈಗಾರಿಕೆಗಳ ಸ್ಥಾಪನೆಯಾಗಿದ್ದು, ಲಾಂತರ ಮಂದಿಗೆ ಉದ್ಯೋಗ ಅವಕಾಶ ಸಿಕ್ಕಿದೆ. ಇದರ ಜತೆಗೆ ಆಂಧ್ರಪ್ರದೇಶ, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಶ್ರೀನಿವಾಸಪುರ, ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲೂ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎಂಬುದು ಸ್ಥಳಿಯರ ಬೇಡಿಕೆಯಾಗಿದೆ.

ಯಾವುದೇ ಕ್ಷೇತ್ರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ಸ್ಥಳಿಯಾಗಿ ಉದ್ಯೋಗಾವಕಾಶ ಲಭಿಸುತ್ತದೆೆ. ಕೈಗಾರಿಕೆಗಳಿಗೆ ಭೂಮಿ ಬಿಟ್ಟುಕೊಡುವ ರೈತರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ಕಲ್ಪಿಸುತ್ತದೆ. ಜಮೀನಿನಲ್ಲಿ ಬೆಳೆಯಲಾಗಿರುವ ಮಾವು, ತೆಂಗು, ಸೇರಿದಂತೆ ಇತರ ಬೆಳೆಗಳಿಗೆ, ಕೊಳವೆಬಾವಿಗೆ, ಕಟ್ಟಡಗಳಿಗೆ ಬೆಲೆ ನಿಗದಿ ಮಾಡಿ ಸೂಕ್ತ ಕಾಲಕ್ಕೆ ಪರಿಹಾರ ಕಲ್ಪಿಸುತ್ತಾರೆ. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಪರಿಹಾರ ನೀಡಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.

ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ವೆಂಕಟಶಿವಾರೆಡ್ಡಿ ಅವರು ಸಹ ಸರ್ಕಾರದ ಮೇಲೆ ಒತ್ತಡ ಹಾಕಿ ಭೂಮಿ ಕಲ್ಪಿಸುವಂತೆ ಕೇಳಿದ್ದರು. ಜತೆಗೆ ತಾಲೂಕಿನ ಜನತೆಯ ಬಹು ವರ್ಷಗಳ ಬೇಡಿಕೆಯಾಗಿತ್ತು. ಇನ್ನು ಜಿಲ್ಲೆಯಲ್ಲಿ ಮತ್ತಷ್ಟು ಕೈಗಾರಿಕೆಗಳು ಗರಿಗೆದರಲಿದ್ದು, ಲಾಂತರ ಮಂದಿಗೆ ಉದ್ಯೋಗ ಅವಕಾಶ ಸಿಗುವ ನಿರೀೆಯಿದೆ.

ಶ್ರೀನಿವಾಸಪುರ ತಾಲೂಕು ಯಲ್ದೂರು ಹೋಬಳಿ ವ್ಯಾಪ್ತಿಯಲ್ಲಿರುವ ಯದರೂರು ಸಮೀಪ ಸುಮಾರು 1,200 ಎಕರೆಗೂ ಹೆಚ್ಚು ಜಮೀನನ್ನು ಕೈಗಾರಿಕಗಳಿಗೆ ಗುರುತಿಸಲಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಬಿಟ್ಟುಕೊಡಲು ಈಗಾಗಲೇ ರೈತರಿಗೆ ತಿಳಿವಳಿಕೆ ಪತ್ರ ನೀಡಿ ಸಹಕಾರ ಕೋರಲಾಗಿದೆ.

ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ

ಸಾಧಕ&ಬಾಧಕಗಳ ಬಗ್ಗೆ ಚರ್ಚಿಸಲು, ಆಕ್ಷೇಪಣೆಗಳನ್ನು ಸಲ್ಲಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಜೂ.2 ಮತ್ತು 3 ರಂದು ರೈತರ ಸಭೆ ಕರೆದಿದ್ದು, ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ. ಈ ಬಗ್ಗೆ ಈಗಾಗಲೇ ರೈತರಿಗೆ ನೊಟೀಸ್​ ನೀಡಲಾಗಿದೆ. ಸಭೆಯಲ್ಲಿ ರೈತರ ಆಕ್ಷೇಪ ಹೇಳಿಕೊಳ್ಳಲು ಅವಕಾಶ ನೀಡಲಾಗುವುದು. ಪರ ವಿರೋಧ ಚರ್ಚೆಯಾಗಿ ಅಭಿಪ್ರಾಯ ಸಂಗ್ರಹಿಸುವ ಮೂಲಕ ಅಧಿಕಾರಿಗಳು ಮುಂದಿನ ಕ್ರಮವಹಿಸಲಿದ್ದಾರೆ.

ಹೆಚ್ಚು ಪರಿಹಾರ ಕಲ್ಪಿಸಲು ಒತ್ತಾಯ

ಈಗಾಗಲೇ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗಿರುವ ಕಡೆ ರೈತರು ಎಕರೆಗಟ್ಟಲೇ ಜಮೀನನ್ನು ಬಿಟ್ಟುಕೊಂಡಿದ್ದಾರೆ. ಆದರೆ ಭೂ ವಂಚಿತರಿಗೆ ಸಮಾಧಾನಕರ ಉದ್ಯೋಗ ಕೊಟ್ಟಿಲ್ಲ. ಆ ರೀತಿ ಯದರೂರು ಕಡೆ ಆಗುವುದು ಬೇಡ. ಕಂಪನಿಗಳಿಗೆ ಭೂಮಿ ನೀಡುವ ರೈತರ ಮಕ್ಕಳಿಗೆ ಉನ್ನತ ಹುದ್ದೆ ಕಲ್ಪಿಸಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡಬೇಕು, ಯಾವುದೇ ಕಾರಣಕ್ಕೂ ವಂಚಿಸಬಾರದು. ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಪರಿಹಾರ ಕಲ್ಪಿಸಬೇಕು ಎಂದು ಯಲ್ದೂರು ಹೋಬಳಿ ಕರವೇ ಅಧ್ಯಕ್ಷ ಅಮರೇಶ್​ ಒತ್ತಾಯಿಸಿದ್ದಾರೆ.

 ಪರ&ವಿರೋಧ ಚರ್ಚೆ

ಯದರೂರು ಸಮೀಪ ಜಾಗ ಗುರುತಿಸಲಾಗಿದೆ. ಇದಕ್ಕೆ ಈಗಾಗಲೇ ಪರ&ವಿರೋಧ ಚರ್ಚೆ ನಡೆಯುತ್ತಿದ್ದು, ರಾಜಕೀಯವಾಗಿಯೂ ಹಲವು ಬೆಳವಣಿಗೆಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಕೈಗಾರಿಕೆಗಳು ಸ್ಥಾಪನೆ ಆದರೆ ಹಾಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ಕೀರ್ತಿ ಸಲ್ಲುತ್ತದೆ ಎಂಬ ಭಾವನೆ ಕಾಂಗ್ರೆಸ್ಸಿಗರಲ್ಲಿದೆ. ಇದಕ್ಕಾಗಿಯೇ ಕೆಲ ತಿಂಗಳುಗಳ ಹಿಂದೆ ಕಾಂಗ್ರೆಸ್​ನ ಕೆಲ ಮುಖಂಡರು ಗ್ರಾಮದಲ್ಲಿ ಸಭೆ ನಡೆಸಿರುವುದರ ಜತೆಗೆ ಯದರೂರು ರೈತ ಹೋರಾಟ ಸಮಿತಿ ಕಟ್ಟಿಕೊಂಡು ಕೈಗಾರಿಕಾ ಪ್ರದೇಶ ಮಾಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದು, ಕೈಗಾರಿಕೆಗಳಿಗೆ ಅವಕಾಶ ನೀಡದಂತೆ ಒತ್ತಾಯಿಸಿದ್ದಾರೆ.

ಪರಭಾರೆ ಸ್ಥಗಿತ

ಯದರೂರು ಸೇರಿ ಸುತ್ತಮುತ್ತಲಿನ ಗ್ರಾಮಗಳ ಸರ್ವೇ ನಂಬರ್​ ಪೈಕಿ ಜಮೀನನ್ನು ಕೈಗಾರಿಕೆ ಪ್ರದೇಶ ನಿರ್ಮಾಣಕ್ಕೆ ಗುರುತು ಮಾಡಲಾಗಿದೆ. ಆ ಜಾಗ ಸಂಬಂಧದ ವಹಿವಾಟನ್ನು ಕಂದಾಯ ಇಲಾಖೆಯಂದ ತಡೆ ಹಿಡಿದಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಪರಭಾರೆ ಮಾಡುತ್ತಿದ್ದಾರೆ. ಬ್ಯಾಂಕ್​ಗಳಲ್ಲಿ ಸಾಲ ಪಡೆದುಕೊಳ್ಳಲಾಗುತ್ತಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದ್ದು, ಗೊಂದಲ ನಿವಾರಣೆಗೆ ಅಧಿಕಾರಿಗಳು ಮುಂದಾಗಬೇಕಾಗಿದೆ.

ಜಿಲ್ಲೆಯ ಯಾವುದೇ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಯಾದರೆ ಸ್ವಾಗತಿಸುತ್ತೇವೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಸವಲತ್ತುಗಳನ್ನು ಕಲ್ಪಿಸಬೇಕು. ಸ್ಥಳಿಯರಿಗೆ ಆದ್ಯತೆ ನೀಡಲು ಕ್ರಮವಹಿಸಬೇಕು.

- ಎಂ.ಕೆ.ರಾವೇಂದ್ರ

ಕರವೇ ಜಿಲ್ಲಾಧ್ಯಕ್ಷ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net