

ಬೆಟ್ಟದಪುರ: ತಾಲೂಕಿನ ಬಡವರ ಹಾಗೂ ಗ್ರಾಮೀಣ ಜನರ ಮತ್ತು ರೈತರಿಗೆ ಸಹಾಯವಾಗಲಿ ಎಂದು ಸಚಿವ ಕೆ.ವೆಂಕಟೇಶ್ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ತಾಲೂಕು ಆಶ್ರಯ ಸಮಿತಿ ಮತ್ತು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.
ಬೆಟ್ಟದಪುರ ಸಮೀಪದ ರಾಜನಬಿಳಗೂಲಿ ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ತಾಲೂಕಿಗೆ ಸಚಿವರು ಹತ್ತು ಸಹಕಾರ ಸಂಘಗಳನ್ನು ಸ್ಥಾಪಿಸಲು ಮುಂದಾಗಿದ್ದು, ಈಗಾಗಲೇ ಐದು ಸೊಸೈಟಿಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ಐದು ಸಂಘಗಳು ಮುಂಬರುವ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ. ಗ್ರಾಮದ ಜನರು ಸಂಘಗಳಲ್ಲಿ ರಾಜಕೀಯವನ್ನು ಬೆರೆಸದೆ ಎಲ್ಲರೂ ಒಗ್ಗಟ್ಟಾಗಿ ಸಂಘದ ಅಭಿವೃದ್ಧಿಗೆ ದುಡಿಯಬೇಕು ಹಾಗೂ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು.
ನೂತನ ಎಂಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಈಚೂರು ಲೋಕೇಶ್ ಹಾಗೂ ಪ್ರಮುಖರನ್ನು ಸನ್ಮಾನಿಸಲಾಯಿತು. ಮೈಮುಲ್ ನಿರ್ದೇಶಕ ಪ್ರಕಾಶ್, ಕಿತ್ತೂರು ಸೊಸೈಟಿ ಅಧ್ಯಕ್ಷ ಸುಮಿತ್, ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಮಣಿಕಂಠ, ಮುಖಂಡರಾದ ಚಂದ್ರು, ಮಾದಯ್ಯ, ಮೂರ್ತಿ, ಜಗದೀಶ್, ಮಲ್ಲಿಕಾರ್ಜುನ, ವೆಂಕಟೇಶ್, ರೇವಣ್ಣ, ತಮ್ಮಯ್ಯ, ಸುರಗಳ್ಳಿ ಶಂಕರೇಗೌಡ, ಅದಾಗಿಗೌಡ, ಸಿಇಒ ವಿಶ್ವನಾಥ್ ಇತರರು ಇದ್ದರು.