ಏಮ್ಸ್ ಸ್ಥಾಪನೆಗೆ ತಾಕತ್ತು ಬೇಕಿಲ್ಲ. ಬುದ್ದಿ ಬೇಕು- ಶಾಸಕ

Dr.Shivaraj Patil
Dr.Shivaraj Patil
Published on

 ರಾಯಚೂರು ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸಲು ತಾಕತ್ತು ಬೇಕಿಲ್ಲ, ಅದಕ್ಕೆ ಬುದ್ದಿ ಬೇಕು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಸಚಿವ ಎನ್.ಎಸ್.ಬೋಸರಾಜು ಅವರಿಗೆ ತಿರುಗೇಟು ನೀಡಿದರು.

ನಗರದ ರಾಂಪೂರು ಜಲಶುದ್ಧೀಕರಣ ಘಟಕದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏಮ್ಸ್ ಸ್ಥಾಪನೆ ಕುರಿತು ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಕ್ಯಾಬಿನೆಟ್‌ನಲ್ಲಿ ಪಾಸ್ ಮಾಡಿಸಿದರೆ ಏಮ್ಸ್ ಮಾಡಲು ಸಾಧ್ಯವಾಗುತ್ತದೆ.

ಕೇಂದ್ರ ಸರ್ಕಾರ ರಾಷ್ಟçದಲ್ಲಿ ಏಮ್ಸ್ ಮಂಜೂರು ಮಾಡುವ ಕುರಿತು ನಿರ್ಧಾರ ಕೈಗೊಂಡ ಸಮಯದಲ್ಲಿ ಕರ್ನಾಟಕದಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಕುರಿತು ಹೆಸರನ್ನು ಪ್ರಸ್ತಾ÷್ತಪಿಸಲಾಗುವುದು. ಏಮ್ಸ್ ಮಂಜೂರು ಮಾಡಿಸಲು ತಾಕತ್ತು ಬೇಕಿಲ್ಲ . ರಾಜ್ಯ ಸರ್ಕಾರ ಏಮ್ಸ್ ಮಂಜೂರಿಗೆ ಏನು ಮಾಡಬೇಕು ಅದನ್ನು ಮೊದಲು ಮಾಡಲಿ ಕದ್ದು ಮುಚ್ಚಿ ಪತ್ರಗಳನ್ನು ಬರೆಯುವುದಲ್ಲ. ಕಾನೂನಾತ್ಮಕವಾಗಿ ಏಮ್ಸ್ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಪಾಲಿಕೆ ಸದಸ್ಯರಾದ ಇ.ಶಶಿರಾಜ, ಎನ್.ಕೆ.ನಾಗರಾಜ, ವಿ.ನಾಗರಾಜ, ಪ್ರಮುಖರಾದ ರವೀಂದ್ರ ಜಲ್ದಾರ, ಕಡಗೋಲ ಆಂಜನೇಯ್ಯ, ನರಸರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ಸನ್ನಿ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net