ವಿವಿಯಲ್ಲಿ ಹರಿದಾಸ ಅಧ್ಯಯನ ಪೀಠ ಸ್ಥಾಪಿಸಿ

10-10-Shiva-2
ಯಚೂರು ವಿವಿಯಲ್ಲಿ ಹರಿದಾಸ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿಗೆ ಹರಿದಾಸ ಸಾಹಿತ್ಯ ಅಭಿಮಾನಿಗಳಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು. ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ, ತ್ರಿವಿಕ್ರಮ ಜೋಷಿ, ವೆಂಕಟರಾವ್ ಕುಲಕರ್ಣಿ, ಮುರಳೀಧರ ಕುಲಕರ್ಣಿ, ಪಲಗುಲ ನಾಗರಾಜ, ಡಾ.ಆನಂದತೀರ್ಥ ಡ್ಮವೀಸ್, ಪ್ರಸನ್ನ ಆಲಂಪಲ್ಲಿ ಇದ್ದರು.
Published on

ರಾಯಚೂರು: ರಾಯಚೂರು ವಿಶ್ವವಿದ್ಯಾಲಯದಲ್ಲಿ ಹರಿದಾಸ ಅಧ್ಯಯನ ಪೀಠ ಸ್ಥಾಪಿಸುವ ಕುರಿತಂತೆ ವಿವಿ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಜತೆಗೆ ಹರಿದಾಸ ಸಾಹಿತ್ಯ ಅಭಿಮಾನಿಗಳು ಮಂಗಳವಾರ ಚರ್ಚೆ ನಡೆಸಿ ಅಗತ್ಯಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಹರಿದಾಸರ ತವರುರಾಗಿದೆ. ದಾಸ ಸಾಹಿತ್ಯದ ತೌಲಿನಿಕ ಅಧ್ಯಯನದ ಉದ್ದೇಶದಿಂದ ವಿವಿಯಲ್ಲಿ ಹರಿದಾಸ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಕುಂದಾಚಾರ್ಯ ಜೋಶಿ ಮಾತನಾಡಿ, ದಾಸ ಸಾಹಿತ್ಯ ಎಂದರೆ ಭಕ್ತಿಯ ಕಣಜ, ಅದೊಂದು ಆದರ್ಶ. ಅಂತಹ ಸಾಹಿತ್ಯ ಕೇವಲ ಒಂದು ವರ್ಗಕ್ಕೆ ಸಿಮೀತವಾಗಿಲ್ಲ. ದಾಸರು ಮಾನವ ಜನಾಂಗಕ್ಕೆ ಒಳಿತು ಬಯಸಿದ ಮಹನೀಯರಾಗಿದ್ದು, ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲಲು ಅಧ್ಯಯನ ಪೀಠ ಅವಶ್ಯವಾಗಿದೆ ಎಂದರು.
ಬಿಜೆಪಿ ಮುಖಂಡರ ತ್ರಿವಿಕ್ರಮ ಜೋಷಿ ಮಾತನಾಡಿ, ಅಧ್ಯಯನ ಪೀಠ ಸ್ಥಾಪನೆಗೆ ಸಂಬಂಸಿದಂತೆ ಸರ್ಕಾರ ಮಟ್ಟದಲ್ಲಿ ಯಾವುದಾದರೂ ತೊಡಕುಗಳಿದ್ದರೆ, ಅವುಗಳನ್ನು ಬಗೆಹಿರಸಿ ಅಧ್ಯಯನ ಪೀಠ ಸ್ಥಾಪನೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ, ವೆಂಕಟರಾವ್ ಕುಲಕರ್ಣಿ, ಮುರಳೀಧರ ಕುಲಕರ್ಣಿ, ಪಲಗುಲ ನಾಗರಾಜ, ಡಾ.ಆನಂದತೀರ್ಥ ಡ್ಮವೀಸ್, ಪ್ರಸನ್ನ ಆಲಂಪಲ್ಲಿ, ವಿಷ್ಣು ತೀರ್ಥ, ವಸುದೇಂದ್ರ ಸಿರವಾರ, ವೆಂಕಟೇಶ ನವಲಿ, ರೂಪಾ ಡ್ನವೀಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net