ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ದಸರಾ ಪ್ರಾಧಿಕಾರ ರಚಿಸಿ

K.M.GANESH
Published on

ಮಡಿಕೇರಿ: ಸುಮಾರು ೧೫೦ ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ವಿಖ್ಯಾತ ಮಡಿಕೇರಿ ದಸರಾ ಮಹೋತ್ಸವವನ್ನು ಮತ್ತಷ್ಟು ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ನಡೆಸಲು ಬಜೆಟ್‌ನಲ್ಲಿ ಸರ್ಕಾರ ಅನುದಾನ ಮೀಸಲಿಡಬೇಕು. ಇದಕ್ಕಾಗಿ ದಸರಾ ಪ್ರಾಧಿಕಾರ ರಚಿಸಬೇಕು ಎಂದು ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದರು.


ಈ ಬಾರಿಯ ದಸರಾ ಮಹೋತ್ಸವ ಜಿಲ್ಲೆಯ ಶಾಸಕದ್ವಯರ ಸಂಪೂರ್ಣ ಸಹಕಾರದಿಂದ ಅದ್ದೂರಿಯಾಗಿ ನಡೆದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ವರ್ಷಗಳಲ್ಲಿ ದಸರಾ ಆಚರಣೆಗೆ ಬಜೆಟ್‌ನಲ್ಲೇ ಹಣವನ್ನು ಮೀಸಲಿಟ್ಟರೆ ದಸರಾ ಸಮಿತಿಗಳ ಕಾರ್ಯ ಸುಗಮವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಮತ್ತೊಬ್ಬ ಮಾಜಿ ಕಾರ್ಯಾಧ್ಯಕ್ಷ ಎಂ.ಪಿ.ಕೃಷ್ಣರಾಜು ಮಾತನಾಡಿ, ಮಡಿಕೇರಿ ದಸರಾದ ಗತವೈಭವದ ಉಳಿವಿಗೆ ಸರ್ಕಾರದ ಸಹಕಾರ ಅಗತ್ಯ ಎಂದರು.


ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿಗಳಲ್ಲಿ ಸಕ್ರಿಯರಾಗಿರುವ ಡಿ.ಕೆ.ಮೋಹನ್, ಆರ್.ಎಸ್.ಬಾಬು ನಾಯ್ಡು, ಬೈಶ್ರೀ ಪ್ರಕಾಶ್ ಹಾಗೂ ಎನ್.ಸಿ.ಸುನೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net