

ವಿಜಯಪುರ: ಅತ್ಯಂತ ಹಿಂದುಳಿದ ತ್ರಿಮತಸ್ಥ ಸಮುದಾಯಕ್ಕೆ ರಾಜ್ಯ ಸರ್ಕಾರ ಕೂಡಲೇ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸಮುದಾಯದ ಅಭಿವೃದ್ಧಿ ಮತ್ತು ನಿಗಮ ಸ್ಥಾಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಎಲ್ಲರೂ ಒಂದಾಗಬೇಕು ಎಂದು ತ್ರಿಮತಸ್ಥ ಗುರು ರವಿದಾಸ್ ಪರಿಷತ್ನ ಪ್ರಧಾನ ಸಂಚಾಲಕ ಡಾ. ಗುರುರಾಜ್ ಬೀಡಿಕರ್ ಕರೆ ನೀಡಿದರು.
ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮೋಚಿಗಾರ ೇಮಾಭಿವೃದ್ಧಿ ಸಂದ ಪ್ರಥಮ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ತ್ರಿಮತಸ್ಥ ಸಮುದಾಯವು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸಮುದಾಯವು ಮಾದಿಗ ಸಮುದಾಯದಿಂದ ಬೇರ್ಪಟ್ಟಿದ್ದು, ಸದ್ಯ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಲು ಆಯೋಗ ಮತ್ತು ರಾಜ್ಯ ಸರ್ಕಾರ ನಿಗದಿಪಡಿಸಬೇಕು. ಅಲ್ಲದೆ, ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ತ್ರಿಮತಸ್ಥ ಸಮುದಾಯಕ್ಕೆ ಕೂಡಲೇ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ತ್ರಿಮತಸ್ಥ ಸಮುದಾಯದವರು ಅತ್ಯಂತ ಸೌಮ್ಯ ಸ್ವಭಾವದವರು. ತಮ್ಮ ಹಕ್ಕುಗಳಿಗಾಗಿ ಈವರೆಗೂ ಎಲ್ಲಿಯೂ ಕೂಡ ಬಂಡಾಯ ಪ್ರತಿಭಟನೆ ಮಾಡಿದ ಉದಾಹರಣೆಗಳಿಲ್ಲ. ಸೂಕ್ಷ$್ಮ ಸಮುದಾಯವಾದರೂ ಯಾವುದೇ ನ್ಯಾಯ ಬದ್ಧ ಪಾಲನ್ನು ನ್ನು ಪಡೆದಿಲ್ಲ. ಸಮುದಾಯದ ಸುಸ್ಥಿರ ಬೆಳವಣಿಗೆಗಾಗಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ದೇಶದ ಪ್ರತಿ ಒಂದು ಜಾತಿ ಸಮುದಾಯಗಳು ತಮ್ಮೊಳಗೆ ಸಂಟಿತರಾಗುವ ಮೂಲಕ ಸಶಕ್ತವಾಗಿ ಬೆಳದಿವೆ. ಹಾಗೆಯೇ ತ್ರಿಮತಸ್ಥ ಸಮುದಾಯದ ಡೋಹರ, ಮಚಿಗಾರ, ಸಮಗಾರ ಎಂಬ ಪಂಗಡಗಳು ಒಂದಾಗಲು ಮುಂದೆ ಬರಬೇಕು. ಹೀಗೆ ಒಂದಾದಾಗ ಮಾತ್ರವೇ ಸಮುದಾಯವು ಎಲ್ಲರಂತೆ ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಿಳಿಸಿದರು.
ನಾಗಠಾಣ ಕ್ಷೇತ್ರದ ಶಾಸಕ ವಿಠಲ ಕಟಕಧೋಂಡ ಮಾತನಾಡಿ, ತ್ರಿಮತಸ್ಥ ಸಮುದಾಯದ ಹಿತ ಕಾಪಾಡುವ ನಿಟ್ಟಿನಲ್ಲಿ ತಾವು ಸದಾ ಸಿದ್ಧ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸುವ ಜತೆಗೆ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.
ಸಂದ ಕಾರ್ಯದರ್ಶಿ ಸುನೀಲ್ ಜೈನಾಪುರ ಸ್ವಾಗತಿಸಿದರು. ಜ್ಞಾನಯೋಗಾಶ್ರಮದ ಸಂಗಮೇಶ್ವರ ಸ್ವಾಮೀಜಿ ಹಾಗೂ ಗೊರನಾಳ ಓಂಕಾರಾಶ್ರಮದ ಡಾ. ವಿರೂಪಾ ದೇವರು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಚಿದಾನಂದ ಪೋಳ, ಸಿದ್ದರಾಮ ಹತ್ತರಕರ, ಸಿದ್ದಪ್ಪಾ ಆವಜಿ, ರೇವಣ್ಣ ಕಡೆಮನಿ, ಜಗನ್ನಾಥ ಅಳವಂಡಿ, ರೇಖಾ ನಾಗರಾಜ್, ಅಶೋಕ ನಿಡಗಲ, ಸಿದ್ದಪ್ಪ ಕಮ್ಮಾರ, ಡಾ. ಪ್ರಕಾಶ ಇನಾಮದಾರ, ಪ್ರಶಾಂತ ಕಿರಣಗಿ, ಅನುಸೂಯ ಮಾದರಿ, ರೇಣುಕಾ ಹೊನಕೇರಿ ಮತ್ತಿತರರಿದ್ದರು.