

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನು ಶಿಕ್ಷಣದ ಮೂಲಕ ತೋಲಗಿಸಲು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಕರ ಕೊರತೆ ಮದ್ಯಯು ಎಸ್ಸೆಸ್ಸೆಲ್ಸಿ -Àಲಿತಾಂಶದಲ್ಲಿ ಸಾಧನೆ ಮಾಡಲು ಹರಸಾಹಸ ಮಾಡುತ್ತಿದ್ದು, ಈ ಬಾರಿ ಯಾವುದೇ ಕಾರಣಕ್ಕೆ -Àಲಿತಾಂಶ ಕಡಿಮೆಯಾಗದಂತೆ ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ ಮಾಡುವುದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಳ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ -Àಲಿತಾಂಶ ಪಡೆಯಲು ಒಟ್ಟು ೪ ಘಟಕ ಪರೀಕ್ಷೆ ನಡೆಸುವ ಯೋಜನೆ ಹಾಕಿಕೊಂಡಿದ್ದ ಇಲಾಖೆ, ಈಗಾಗಲೇ ಯಶಸ್ವಿಯಾಗಿ ೩ ಪರೀಕ್ಷೆ ಪೂರ್ಣಗೊಳಿಸಿದೆ. ಪೂರ್ವಸಿದ್ದತಾ ಪರೀಕ್ಷೆಯನ್ನೂ ವಾರ್ಷಿಕ ಪರೀಕ್ಷೆ ರೀತಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಂದೆ ತರಲು ಬಡಿ ಪೇರಿಂಗï ಕಲಿಕಾ ಆಸರೆಯಂತಹ ಕಾರ್ಯಕ್ರಮಗಳ ಜತೆಗೆ ಮರು ಸಿಂಚನ ಪುಸ್ತಕ ಬಳಸಿ ಬೋಧನೆಗೆ ಒತ್ತು ನೀಡಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ತಾಯಂದಿರೊAದಿಗೂ ಶಿಕ್ಷಕರು ಸಭೆ ನಡೆಸುವ ಕಾರ್ಯ ಹಮ್ಮಿಕೊಂಡಿದೆ. ಶಾಲೆ ಆರಂಭಕ್ಕೆ ಮುನ್ನ ಹಾಗೂ ಶಾಲೆ ಅವಽ ಬಳಿಕ ಒಂದು ಗಂಟೆ ವಿಶೇಷ ತರಗತಿ ಆಯೋಜನೆ, ವೇಕ್‌ಅಪ್‌ಕಾಲï ಸೇರಿ -Àಲಿತಾಂಶ ಸುಧಾರಣೆಗೆ ಪೂರಕವಾದ ನಾನಾ ಕಾರ್ಯಕ್ರಮಗಳ ಮೂಲಕ ಗುರಿ ಸಾಽಸಲು ಪ್ರಯತ್ನಿಸುತ್ತಿದೆ.
ಎಷ್ಟು ವಿದ್ಯಾರ್ಥಿಗಳ ನೋಂದಣಿ
ಮಾರ್ಚï ೨೧ರಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಈ ಬಾರಿ ಜಿಲ್ಲೆಯಲ್ಲಿ ಪರೀಕ್ಷೆಯಲ್ಲಿ ಒಟ್ಟು ೩೦,೯೭೬ ವಿದ್ಯಾರ್ಥಿಗಳು ನೋಂದನಿ ಮಾಡಿಕೋಂಡಿದ್ದು, ಈ ಪೈಕಿ ರಾಯಚೂರು ೮,೩೨೪ ವಿದ್ಯಾರ್ಥಿಗಳು,ಸಿಂಧನೂರು ೬೦೬೪,ಲಿಂಗಸೂಗೂರು ೬೨೫೫,ಮಾನ್ವಿ ೪೪೩೮,ದೇವದುರ್ಗ ೫೮೯೫,ದೇವದುರ್ಗದಲ್ಲಿ ೪೪೩೮ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆದರಂತೆ ಕಲಿಕೆಯಲ್ಲಿ ಹಿಂದುಳಿದ ಜಿ¯್ಲೆಯ ೩,೮೨೩ ವಿದ್ಯಾರ್ಥಿಗಳನ್ನು ಗುರುತಿಸಿರುವ ಇಲಾಖೆ, ನಾನಾ ಕಾರ್ಯಕ್ರಮಗಳ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ -Àಲಿತಾಂಶಕ್ಕೆ ಪ್ರೇರೇಪಿಸುತ್ತಿದೆ.
-Àಲಿತಾಂಶ ಸುಧಾರಣೆಗೆ ಸಂಘ ಸಂಸ್ಥೆ ಸಹಕಾರ
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ -Àಲಿತಾಂಶ ಹೆಚ್ಚಳವಾಗಲು ವಿವಿಧ ಸಂಘ ಸಂಸ್ಥೆಗಳಿAದ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಹೆಚ್ಚಿನ ಅಂಕಗಳು ಬರಬೇಕೆಂದು ೩೦೯೭೬ ವಿದ್ಯಾರ್ಥಿಗಳಿಗೆ ಚಾಟ್‌ಗಳನ್ನು ನೀಡಲಾಗಿದ್ದು,ಈ ಚಾಟ್‌ಗಳ ಮೂಲಕ ಒಬ್ಬ ವಿದ್ಯಾರ್ಥಿ ಸುಲಭವಾಗಿ ೧೮ ರಿಂದ ೨೦ ಅಂಕ ಗಳಿಸಬಹುದಾಗಿದೆ. ಜತೆಗೆ ಜಿಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ನೇತೃತ್ವದಲ್ಲಿ ಸುಮಾರು ೧೦ ಸಭೆಗಳನ್ನು ಮಾಡಲಾಗಿದೆ. ಅದರಂತೆ ವೆಬ್ ಕಾಸ್ಟಿಂಗ್ ಮೂಲಕ ಕಳೆದ ಬಾರಿಯಿಂದ ಪರಿಕ್ಷಾರ್ಥಿಗಳ ಮೇಲೆ ಹದ್ದಿನ ಕಣ್ಣಿಡುವ ಕಾರ್ಯ ಆರಂಭವಾಗಿದೆ. ವೆಬï ಕಾಸ್ಟಿಂಗ್ ಮೊರೆ ಹೋದ ಬಳಿಕ ಪರಿಶ್ರಮಪಟ್ಟ ವಿದ್ಯಾರ್ಥಿಗಳಷ್ಟೇ ಗೆಲ್ಲುವುದು ಗ್ಯಾರಂಟಿ ಎಂಬ ಅಭಿಪ್ರಾಯವಿದ್ದು, ನಿರೀಕ್ಷೆಯಂತೆ -Àಲಿತಾಂಶ ದೊರೆಯುವ ಆತಂಕವೂ ಕಾಡುತ್ತಿದೆ.
------
ಕೋಟ್
--------
ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ -Àಲಿತಾಂಶ ಉತ್ತಮವಾಗಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆಗಳನ್ನು ಮಾಡಲಾಗಿದೆ. ಬೆಳ್ಳಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ವಿಜ್ಞಾನಕ್ಕೆ ಚಾಟ್ ನೀಡಲಾಗಿದೆ. ಇದರಿಂದ ವಿದ್ಯಾರ್ಥಿ ಸುಲಭವಾಗಿ ೧೮ ರಿಂದ ೨೦ ಅಂಕ ಪಡೆಯಬಹುದಾಗಿದೆ. ನಾನು ಸಹ ವಾರದಲ್ಲಿ ಎರಡರಿಂದ ಮೂರು ಭಾರಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವೆ.
ರಾಹುಲ್ ತುಕಾರಾಂ ಪಾಂಡ್ವೆ ಸಿಇಓ ಜಿಪಂ ಸಿಇಓ ರಾಯಚೂರು