ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟ: ಅ.2ರಂದು ನಗರದಲ್ಲಿ ಬಹುಮಾನ ವಿತರಣೆ

New Gandhiji
Published on

ಮಂಡ್ಯ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಪ್ರೌಢಶಾಲೆ ವಿಭಾಗ: ಮದ್ದೂರು ಪೂರ್ಣಪ್ರಜ್ಞ ಕಾನ್ವೆಂಟ್‌ನ ಎಸ್.ಆರ್.ಲಿಖಿತಾರಾಜು(ಪ್ರ), ವಿ.ಸಿ ಫಾರ್ಮ್ ಸರ್ಕಾರಿ ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗ ಸುಚಿತ್ರಾ(ದ್ವಿ), ಅನಿಕೇತನ ಪ್ರೌಢಶಾಲೆಯ ಲಕ್ಷಯ್‌ಗೌಡ(ತೃ), ಪದವಿ ಪೂರ್ವ ಕಾಲೇಜು ವಿಭಾಗ: ಬಸರಾಳು ಸರ್ಕಾರಿ ಪ.ಪೂ ಕಾಲೇಜಿನ ಎಲ್.ಸಂಗೀತಾ(ಪ್ರ), ನಾಗಮಂಗಲ ತಾಲೂಕು ಗಂಗಾಧರೇಶ್ವರ ಪ.ಪೂ ಕಾಲೇಜಿನ ಎಚ್.ಡಿ.ರಕ್ಷಿತಾ(ದ್ವಿ), ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಸ.ಪೂ ಕಾಲೇಜಿನ ಪ್ರಜ್ವಲ್(ತೃ), ಪದವಿ/ಸ್ನಾತಕೋತ್ತರ ವಿಭಾಗ: ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಎಸ್.ಯುಕ್ತಿ(ಪ್ರ), ಕೆ.ಆರ್.ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೂಜಾ(ದ್ವಿ) ಮತ್ತು ನಾಗಮಂಗಲ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನೇತ್ರಾ(ತೃ) ಬಹುಮಾನ ಪಡೆದಿದ್ದಾರೆ.

ಪ್ರಥಮ ಸ್ಥಾನ ಪಡೆದವರಿಗೆ 3 ಸಾವಿರ ರೂ, ದ್ವಿತೀಯ 2 ಸಾವಿರ ರೂ ಹಾಗೂ ತೃತೀಯ ಬಹುಮಾನ 1 ಸಾವಿರ ರೂಗಳನ್ನು ಆ.2ರಂದು ಬೆಳಗ್ಗೆ 9ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ಆಯೋಜಿಸಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net