ಇಂಡಿಯಾನ ಆಸ್ಪತ್ರೆಯಲ್ಲಿ ಇಎಸ್‌ಐಸಿ ಸೌಲಭ್ಯ ಲಭ್ಯ

Capture
Published on

ಹಾಸನ: ಹಾಸನದ ಪ್ರತಿಷ್ಠಿತ ಇಂಡಿಯಾನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ಕಳೆದ ಒಂದೂವರೆ ವರ್ಷದಿಂದ ಹಾಸನ ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಮೂಲಕ ಹೆಸರುವಾಸಿಯಾಗಿದೆ. ಸುಸಜ್ಜಿತ ಕಟ್ಟಡದಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಉಪಕರಣಗಳೊಂದಿಗೆ ಗುಣಮಟ್ಟದ ಚಿಕಿತ್ಸೆಯಾದ, ಕೀಲು ಮತ್ತು ಮೂಳೆ ಚಿಕಿತ್ಸೆ, ಹೃದ್ರೋಗ, ಜನರಲ್ ಸರ್ಜರಿ, ಸ್ತ್ರೀ ರೋಗ ಪ್ರಸೂತಿ ಚಿಕಿತ್ಸೆ ಹಾಗೂ ಜನರಲ್ ಮೆಡಿಸಿನ್ ಜತೆಗೆ ಹಲವಾರು ಇಲಾಖೆಗಳನ್ನು ಆರಂಭಿಸಿದೆ. ಈವರೆಗೂ ಸುಮಾರು 6000ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ ಮತ್ತು ಹೃದ್ರೋಗ ಸಂಬಂಧಿಸಿದ ಚಿಕಿತ್ಸೆಯನ್ನು ಆಯುಷ್ಮಾನ್ ಯೋಜನೆ, ಹೆಲ್ತ್ ಇಶ್ಯುರೆನ್ಸ್ ಹಾಗೂ ಸರ್ಕಾರಿ ಯೋಜನೆಗಳ ಮೂಲಕ ನೀಡುತ್ತ ಬಂದಿದೆ.

ಇದೀಗ ವಿವಿಧ ಸಂಘ-ಸಂಸ್ಥೆ ಸೇರಿದಂತೆ ಉದ್ದಿಮೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಎಸ್‌ಐಸಿ ಯೋಜನೆ ಹೊಂದಿರುವ ಕಾರ್ಮಿಕರಿಗೆ ಆರ್‌ಸಿ ರೋಡ್‌ನಲ್ಲಿರುವ ಇಂಡಿಯಾನ ಆಸ್ಪತ್ರೆಯಲ್ಲಿ ಇಎಸ್‌ಐಸಿ ಯೋಜನೆಯಡಿ ಚಿಕಿತ್ಸೆ ಸೌಲಭ್ಯ ಲಭ್ಯವಿದೆ. ಇಂಡಿಯಾನ ಆಸ್ಪತ್ರೆಯಲ್ಲಿ ವಿಶೇಷವಾಗಿ ಹೃದ್ರೋಗ ವಿಭಾಗ, ಹೃದ್ರೋಗ ಶಸ್ತ್ರಚಿಕಿತ್ಸೆ, ನರರೋಗ ವಿಭಾಗ, ಕೀಲು ಮರು ಜೊಡಣಾ ವಿಭಾಗ, ಮೂತ್ರಪಿಂಡ ವಿಭಾಗ, ಗ್ಯಾಸ್ಟ್ರೋಎಂಟರಾಲಜಿ, ಶ್ವಾಸಕೋಶ ವಿಭಾಗ, ಮಕ್ಕಳ ಶಸ್ತ್ರಚಿಕಿತ್ಸ ವಿಭಾಗ, ಮತ್ತು ಹಲವು ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಕಾರ್ಮಿಕ ಬಂಧುಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕರು ಮತ್ತು ಹೃದ್ರೋಗ ತಜ್ಞರಾ ಡಾ.ಯುಸೆಫ್ ಎ ಕುಂಬ್ಳೆ ವಿನಂತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net