ತ್ರಿಶಂಕು ಸ್ಥಿತಿಯಲ್ಲಿ ಇಎಸ್​ಐ ಆಸ್ಪತ್ರೆ!

Untitled-1
Published on

ವೆಂಕಟರಾಜು ಎಸ್​.ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿನ ನೂರಾರು ಗಾರ್ಮೆಂಟ್ಸ್​, ಫ್ಯಾಕ್ಟರಿ, ವಿವಿಧ ಕಂಪನಿಗಳಲ್ಲಿ ಪ್ರತಿದಿನ ದುಡಿದು ತಿಂಗಳಿಗೊಮ್ಮೆ ಸಂಬಳದ ಮುಖ ನೋಡುವ ಲಾಂತರ ಕಾರ್ಮಿಕರ ಪಾಲಿನ ಸಂಜೀವಿನಿಯಾಗಿ ಆರೋಗ್ಯ ಕಾಪಾಡಾಬೇಕಿದ್ದ ಇಎಸ್​ಐ ಆಸ್ಪತ್ರೆಗೆ ಅನಾರೋಗ್ಯ ಹಿಡಿದಿದೆ.

ಕಟ್ಟಡ ನಿರ್ಮಾಣವಾಗಲು 10 ವರ್ಷ ಬೇಕಾಯಿತು. ಇದೀಗ ಆಸ್ಪತ್ರೆಯನ್ನು ಕೇಂದ್ರ ನಿರ್ವಹಣೆ ಮಾಡಬೇಕೋ ಅಥವಾ ರಾಜ್ಯ ನಿರ್ವಹಣೆ ಮಾಡಬೇಕೋ ಎಂಬ ಜಿಜ್ಞಾಸೆ ಮೂಡಿದೆ. ಈ ತೀರ್ಮಾನ ಕೈಗೊಳ್ಳಲು ಮೂರೂವರೆ ವರ್ಷ ಕಳೆದಿದೆ. ಆದರೆ ಅಂತಿಮ ತೀರ್ಮಾನಕ್ಕೆ ಯಾವ ಸರ್ಕಾರವು ಮುಂದಾಗಿಲ್ಲ. ಸುಸಜ್ಜಿತ ಕಟ್ಟಡವಿದ್ದರೂ ಹೈಟೆಕ್​ ಆಸ್ಪತ್ರೆಗೆ ಬೇಕಾಗಿರುವ ಆತ್ಯಾಧುನಿಕ ಮೆಡಿಕಲ್​ ಉಪಕರಣಗಳು ಆಸ್ಪತ್ರೆಗೆ ಕಾಲಿಡಲು ಎಷ್ಟು ವರ್ಷ ಹಿಡಿಯುವುದೋ ದೇವರೇ ಬಲ್ಲ. ಕಾರ್ಮಿಕರ ರಾ ಕವಚವಾಗಬೇಕಿದ್ದ ಇಎಸ್​ಐ ಆಸ್ಪತ್ರೆಯೇ ಇದೀಗ ತ್ರಿಶಂಕು ಸ್ಥಿತಿಯಲ್ಲಿರುವುದು ತಾಲೂಕಿನ ಕಾರ್ಮಿಕರ ದೌರ್ಭಾಗ್ಯವೇ ಸರಿ.

2014ರಲ್ಲಿ ಸಿದ್ದರಾಮಯ್ಯ ಭೂಮಿ ಪೂಜೆ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಅರೆಹಳ್ಳಿ, ಗುಡ್ಡದಹಳ್ಳಿ ಸಮೀಪ 2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶಂಕು ಸ್ಥಾಪನೆಯಾಗಿದ್ದ 100 ಹಾಸಿಗೆಗಳ ಇಎಸ್​ಐ ಆಸ್ಪತ್ರೆ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದೆ. ಸಿದ್ದರಾಮಯ್ಯ 2ನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡರೂ ಆಸ್ಪತ್ರೆಗೆ ಮಾತ್ರ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.

ಆರೋಗ್ಯ ಸೌಲಭ್ಯಗಳಿಂದ ವಂಚಿತ : ರಾಜಕೀಯ ಲಾಭ&ನಷ್ಟದ ಲೆಕ್ಕಾಚಾರದಲ್ಲಿ 10 ವರ್ಷಗಳಿಂದ ಆರೋಗ್ಯ ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗಿದ್ದಾರೆ. ಆರೋಗ್ಯ ಸೇವೆಗೆ ಸಿದ್ಧವಾಗಿದ್ದ ಇಎಸ್​ಐ ಆಸ್ಪತ್ರೆಯನ್ನಾದರೂ ಸೂಕ್ತ ಸಮಯದಲ್ಲಿ ಉದ್ಘಾಟಿಸಿದಿದ್ದರೆ ಸಹಾಯವಾಗುತ್ತಿತ್ತು. ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಸೂಕ್ತ ಆಸ್ಪತ್ರೆ ಸೌಲಭ್ಯ ಇಲ್ಲ. ರಾಜಕೀಯದ ಹಿನ್ನೆಲೆ ಏನೇ ಇದ್ದರೂ ಕಾರ್ಮಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಆಸ್ಪತ್ರೆ ಶ್ರೀ ಉದ್ಘಾಟಿಸಬೇಕು ಎಂಬುದು ಕಾರ್ಮಿಕರ ಒತ್ತಾಯವಾಗಿದೆ.

ನಾಲ್ಕು ಹಂತಗಳಲ್ಲಿ ವಿಸ್ತರಣೆ : ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ನಾಲ್ಕು ಹಂತಗಳಲ್ಲಿ ವಿಸ್ತರಣೆಯಾಗಿದೆ. ವಿದೇಶಿ ಕಂಪನಿಗಳು ಸೇರಿ ಹತ್ತಾರು ಬಗೆಯ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಿದ್ದು, ಇನ್ನೂ ಹಲವು ಕೈಗಾರಿಕೆ ಸ್ಥಾಪಿಸಲು ಭೂಸ್ವಾಧಿನ ನಡೆಯುತ್ತಲೇ ಇದೆ. ಇಲ್ಲಿನ ಕೈಗಾರಿಕಾ ಪ್ರದೇಶದ ಗಾಮೆಂರ್ಟ್ಸ್​ ಸೇರಿ ಹಲವು ಬೃಹತ್​ ಕೈಗಾರಿಕೆಗಳಲ್ಲಿ ಲಾಂತರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೊಸ ಕೈಗಾರಿಕೆಗಳಿಂದ ಸಾವಿರಾರು ಕಾರ್ಮಿಕರು ಇಲ್ಲಿಯೇ ನೆಲೆಯೂರುವಂತಾಗಿದ್ದು, ಕಾರ್ಮಿಕರ ಆರೋಗ್ಯಕ್ಕಾಗಿ ಸೂಕ್ತ ಇಎಸ್​ಐ ಆಸ್ಪತ್ರೆ ಇಲ್ಲವಾಗಿದೆ.

ರಾಜಕೀಯ ಲಾಭ&ನಷ್ಟಕ್ಕೆ ಒಳಗಾದ ಆಸ್ಪತ್ರೆ : ಕೇಂದ್ರದಲ್ಲಿ ಮಲ್ಲಿಕಾರ್ಜುನ ರ್ಖಗೆ ಕಾರ್ಮಿಕ ಸಚಿವರಾಗಿದ್ದಾಗ ಆಸ್ಪತ್ರೆಯ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಂಡು ಶಂಕುಸ್ಥಾಪನೆಯಾಗಿತ್ತು. 100 ಹಾಸಿಗೆ ಆಸ್ಪತ್ರೆ ಕೇಂದ್ರದ ಕಾರ್ಮಿಕ ಇಲಾಖೆ ನೆರವಿನಿಂದೊಂದಿಗೆ ನಿರ್ಮಾಣವಾಗಿದೆ. ಈ ಹಿಂದೆ ಸ್ಥಳಿಯವಾಗಿ ಕಾಂಗ್ರೆಸ್​ ಶಾಸಕರು ಇದ್ದರು. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಕಟ್ಟಡ ನಿರ್ಮಾಣವಾಗಿದ್ದರೂ ಉದ್ಘಾಟಿಸದೆ ಮುಂದೂಡಲಾಗುತ್ತಿದೆ. ಈಗ ಸ್ಥಳಿಯ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್​ ಆಡಳಿತವಿದ್ದು, ರಾಜಕಾರಣಿಗಳಿಗೆ ಇಚ್ಛಾಶಕ್ತಿ ಕೊರತೆ ಎದುರಾಗಿದೆ.

ಆರೋಗ್ಯ ಸೌಲಭ್ಯಗಳಿಂದ ವಂಚಿತ : ರಾಜಕೀಯ ಲಾಭ&ನಷ್ಟದ ಲೆಕ್ಕಾಚಾರದಲ್ಲಿ 10 ವರ್ಷಗಳಿಂದ ಆರೋಗ್ಯ ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗಿದ್ದಾರೆ. ಆರೋಗ್ಯ ಸೇವೆಗೆ ಸಿದ್ಧವಾಗಿದ್ದ ಇಎಸ್​ಐ ಆಸ್ಪತ್ರೆಯನ್ನಾದರೂ ಸೂಕ್ತ ಸಮಯದಲ್ಲಿ ಉದ್ಘಾಟಿಸಿದಿದ್ದರೆ ಸಹಾಯವಾಗುತ್ತಿತ್ತು. ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಸೂಕ್ತ ಆಸ್ಪತ್ರೆ ಸೌಲಭ್ಯ ಇಲ್ಲ. ರಾಜಕೀಯದ ಹಿನ್ನೆಲೆ ಏನೇ ಇದ್ದರೂ ಕಾರ್ಮಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಆಸ್ಪತ್ರೆ ಶ್ರೀ ಉದ್ಘಾಟಿಸಬೇಕು ಎಂಬುದು ಕಾರ್ಮಿಕರ ಒತ್ತಾಯವಾಗಿದೆ.

ಈ ಆಸ್ಪತ್ರೆಗೆ 80 ಕೋಟಿ ರೂ. ಬಜೆಟ್​ನಲ್ಲಿ ಭೂಮಿಪೂಜೆ ನಡೆಸಲಾಯಿತು. ಬಳಿಕ ಬಜೆಟ್​ 96 ಕೋಟಿಗೆ ಏರಿಕೆಯಾಗಿದೆ. ಗುತ್ತಿಗೆದಾರನಿಗೆ 20 ಕೋಟಿ ರೂ. ಸಂದಾಯವಾಗಬೇಕಿದೆ. ಹಾಗಾಗಿ ಬೀಗ ಕೊಟ್ಟಿಲ್ಲ ಎಂಬ ಸುದ್ದಿ ಇದೆ. ಇದು ಯಾವ ಸರ್ಕಾರವು ಕ್ರೆಡಿಟ್​ ತೆಗೆದುಕೊಳ್ಳುವ ಪ್ರಮೇಯವೇ ಇಲ್ಲ. ಏಕೆಂದರೆ ಕಾರ್ಮಿಕರು ದುಡಿಯುವ ಸಂಬಳದ ಇಎಸ್​ಐ ಸ್ಕೀಂನಲ್ಲಿ ಕಡಿತಗೊಳಿಸಲಾಗುವ ಹಣದಿಂದ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಿಸಿ ಮೂರು ವರ್ಷ ಕಳೆದರೂ ನಿರ್ವಹಣೆ ಇಲ್ಲದೆ ಬಿರುಕು ಮೂಡುತ್ತಿದೆ. ವಿಳಂಬ ನೀತಿ ಮೂಲಕ ಕೇಂದ್ರ, ರಾಜ್ಯ ಸರ್ಕಾರ ಕಾರ್ಮಿಕರಿಗೆ ಮಾಡುತ್ತಿರುವ ದ್ರೋಹ. ಮುಂದಿನ ದಿನಗಳಲ್ಲಿ ಬೃಹತ್​ ಹೋರಾಟ ರೂಪಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. > ಪಿ.ಎ.ವೆಂಕಟೇಶ್​ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ, ದೊಡ್ಡಬಳ್ಳಾಪುರ ವೈದ್ಯಕಿಯ ಉಪಕರಣಗಳಿಗಾಗಿ 27 ಕೋಟಿ ರೂ.ಅಂದಾಜಿಸಲಾಗಿದೆ. ಈ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಿಕೊಳ್ಳಲು ಸಿದ್ಧವಾಗಿಲ್ಲ. ಸಿಬ್ಬಂದಿ ನೇಮಕಾತಿ ಕುರಿತು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇದು ಬೇಡ. ನೇರವಾಗಿ ಸರ್ಕಾರ ನೇಮಕ ಮಾಡಲಿ ಎಂಬುದು ನಮ್ಮ ಬೇಡಿಕೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಆಸ್ಪತ್ರೆಯನ್ನು ಕೇಂದ್ರವೇ ಸುಪರ್ದಿಗೆ ಪಡೆದು ನಿರ್ವಹಣೆ ಮಾಡಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆ ಸಚಿವ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. > ಧೀರಜ್​ ಮುನಿರಾಜು ಶಾಸಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ಸಿದ್ಧವಾಗಿದೆ. ಜನವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಕಟ್ಟಡ ಹಸ್ತಾಂತರವಾಗಿದೆ. ಇದರ ಜತೆಗೆ ಮತ್ತಷ್ಟು ಕಟ್ಟಡ ಕಾಮಗಾರಿ ಆಗಬೇಕಿದೆ. ಆಸ್ಪತ್ರೆಯಲ್ಲಿ ವ್ಯವಸ್ಥಿತ ಮೆಡಿಕಲ್​ ಉಪಕರಣಗಳು ಇಲ್ಲ. 50 ಕೋಟಿ ರೂ. ವೆಚ್ಚದಲ್ಲಿ ಉಪಕರಣಗಳ ಅವಶ್ಯಕತೆ ಇದೆ. ಟೆಂಡರ್​ ಕರೆದು ಕ್ರಮ ಜರುಗಿಸಬೇಕಿದ್ದು, ಇದನ್ನು ರಾಜ್ಯ ನಿರ್ವಹಣೆ ಮಾಡಬೇಕೋ ಅಥವಾ ಕೇಂದ್ರ ಸರ್ಕಾರ ನಿರ್ವಹಣೆ ಮಾಡಬೇಕೆ ಎಂಬುದನ್ನು ತೀರ್ಮಾನಿಸಬೇಕಿದೆ. ಟೆಂಡರ್​ ಪ್ರಕಿಯೆ, ಸಿಬ್ಬಂದಿ ನೇಮಕ ಸೇರಿ ಇತರ ಕೆಲಸಕ್ಕಾಗಿ 3&4 ತಿಂಗಳು ಸಮಯ ಬೇಕಾಗಬಹುದು. > ಸಂತೋಷ ಲಾಡ್​ ಕಾರ್ಮಿಕ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net