ಫೆ.15ಕ್ಕೆ ವಿಚಾರಣೆಗೆ ಹಾಜರಾಗುವಂತೆ ಈಶ್ವರಪ್ಪಗೆ ಬುಲಾವ್

notice to k.s.eshwarappa
ವಿಚಾರಣೆಗೆ ಹಾಜರಾಗುವಂತೆ ದಾವಣಗೆರೆ ಬಡಾವಣೆ ಠಾಣೆ ಪೊಲೀಸರು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ನೋಟಿಸ್ ನೀಡಿದರು.
Published on

ಶಿವಮೊಗ್ಗ: ದಾವಣಗೆರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ದಾವಣಗೆರೆ ಪೊಲೀಸರು ಫೆ.15ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ರಾಷ್ಟ್ರದ್ರೋಹಿಗಳ ಗುಂಡಿಕ್ಕಿ ಕೊಲ್ಲುವ ಕಾನೂನು ತರುವಂತೆ ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ದಾವಣಗೆರೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಡಾವಣೆ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಲತಾ ವಿ.ತಾಳೆಕರ್‌ ಅವರು ನೊಟೀಸ್‌ ಜಾರಿ ಮಾಡಿದ್ದಾರೆ.
ಫೆ.9ರಂದು ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕೆಲವು ಸತ್ಯಾಂಶ ಮತ್ತು ಸನ್ನಿವೇಶಗಳನ್ನು ಖಚಿತಪಡಿಸಿಕೊಳ್ಳಬೇಕಿದೆ. ವಿಚಾರಣೆ ಮಾಡಲು ಪೂರಕ ಕಾರಣಗಳು ಕಂಡುಬಂದಿವೆ. ಆದ್ದರಿಂದ ತಾವು ಫೆ.15ರಂದು ಬೆಳಗ್ಗೆ 10.30ಕ್ಕೆ ಬಡಾವಣೆ ಠಾಣೆಗೆ ಹಾಜರಾಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net