ಈಶ್ವರಪ್ಪಗೆ ಅನಾಮೇಧಯ ಬೆದರಿಕೆ ಪತ್ರ

Kse
Published on

ಶಿವಮೊಗ್ಗ: ಮುಸ್ಲಿಂ ಗೂಂಡಾಗಳೆಂದು ಬಗ್ಗೆ ಪದೇ ಪದೇ ಹೇಳಿಕೆ ನೀಡುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಅನಾಮೇಧಯ ಬೆದರಿಕೆ ಪತ್ರ ಬಂದಿದೆ.

ಕೈ ಬರಹವಿರುವ ಪತ್ರದಲ್ಲಿ ಈಶ್ವರಪ್ಪ ಅವರಿಗೆ ಏಕವಚನದಲ್ಲೇ ನಿಂಧಿಸಲಾಗಿದೆ. ಪತ್ರದಲ್ಲಿ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಲೇಜು ಕಟ್ಟಡಕ್ಕೆ ಮುಸ್ಲಿಮರು ಸಿದ್ಧಪಡಿಸಿದ ಸಿಮೆಂಟ್ ಬ್ರಿಕ್ಸ್ ಬೇಕೇ ಎಂದು ಪ್ರಶ್ನಿಸಿ ಮಲ್ಲೇಶ್ವರನಗರದ ಜಯಲಕ್ಷ್ಮೀ ನಿವಾಸಕ್ಕೆ ಪತ್ರ ಕಳುಹಿಸಿದ್ದಾರೆ.

ಈ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಪ್ತ ಸಹಾಯಕರ ಮೂಲಕ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net